ನವದೆಹಲಿ: ದೆಹಲಿಯಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಖಂಡಿಸಿ ಆಮ್ ಆದ್ಮಿ ಪಕ್ಷ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಹೇಳಿದೆ.
ಕ್ಯಾಬ್ ಆಪರೇಟರ್ ಗಳಿಗೆ ಅನುಕೂಲ ಮಾಡಿಕೊಡಲೆಂದು ಕೇಂದ್ರ ಸರ್ಕಾರ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದ್ದು, ಮೆಟ್ರೋ ನಷ್ಟವನ್ನು ಕಡಿಮೆ ಮಾಡಲು ದರ ಏರಿಕೆ ಮಾಡಲಾಗುತ್ತಿದೆ ಎಂಬ ಸಮರ್ಥನೆಯನ್ನು ಆಪ್ ದೆಹಲಿ ವಿಭಾಗದ ಸಂಚಾಲಕ ಗೋಪಾಲ್ ರೈ ತಿರಸ್ಕರಿಸಿದ್ದಾರೆ.
ಒಂದು ವೇಳೆ ದರ ಏರಿಕೆಯಾದರೆ ಪ್ರಯಾಣಿಸುವವರ ಮೇಲೆ ಅದು ನೇರ ಪರಿಣಾಮ ಬೀರಲಿದೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಿರ್ಧಾರ ದುರದೃಷ್ಟಕರವಾಗಿದ್ದು, ಏಕಪಕ್ಷೀಯವಾಗಿದೆ ಎಂದು ಆಪ್ ಅಸಮಾಧಾನ ವ್ಯಕ್ತಪಡಿಸಿದೆ.