ದೇಶ

ಜಯ್ ಶಾ ಕಂಪನಿಯಲ್ಲಿ ಭ್ರಷ್ಟಾಚಾರ ಪ್ರಶ್ನೆಯೇ ಉದ್ಭವಿಸುವುದಿಲ್ಲ: ಅಮಿತ್ ಶಾ

Shilpa D
ಅಹಮದಾಬಾದ್: ತಮ್ಮ ಪುತ್ರ ಜಯ್ ಶಾ ಕಂಪನಿಯ ಮೇಲೆ ಯಾವುದೇ ರೀತಿಯ ಭ್ರಷ್ಟಾಚಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
2014ರ ಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಯ್ ಶಾ ಅವರ ಉದ್ಯಮದ ಆದಾಯ ಹಲವು ಪಟ್ಟು ಏರಿಕೆಯಾಗಿದೆ ಎಂದು ದಿ ವೈರ್ ಸುದ್ದಿತಾಣದಲ್ಲಿ ವರದಿ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಮಗನ ಕಂಪನಿಯಲ್ಲಿ ಭ್ರಷ್ಟಾಚಾರದ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಜ್ ತಕ್ ಚಾನೆಲ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಹರಿ ಹಾಯ್ದರು. ಕಾಂಗ್ರೆಸ್ ಹಲವು ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದೆ ಎಂದರು. 
ದಿ ವೈರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಂಥಹ ಪ್ರಕರಣಗಳ ವಿರುದ್ಧ ಅವರು ಏಕೆ ಕೇಸ್ ಹಾಕುವ ಧೈರ್ಯ ಮಾಡಲಿಲ್ಲ, ಎಂದು ಪ್ರಶ್ನಿಸಿದ ಅಮಿತ್ ಶಾ ತಮ್ಮ ಪುತ್ರ ಜಯ್ ಶಾ ಮಾನನಷ್ಟ ಮೊಕದ್ದಮೆ ಹೂಡಲಿದ್ದಾರೆ, ನಿಮ್ಮ ಬಳಿ ದಾಖಲೆಗಳಿದರೇ ನೀವು ಕೂಡ ಕೋರ್ಟ್ ಗೆ ಹೋಗಬಹುದು ಎಂದು ಹೇಳಿದ್ದಾರೆ.
ಬಿಜೆಪಿ ಮಾನನಷ್ಟ ಪ್ರಕರಣ ಹೂಡುವುದಾಗಿ ಹೇಳಿದ ಬೆನ್ನಲ್ಲೇ ಕಾಂಗ್ರೆಸ್ ಪ್ರಕರಣದ ತನಿಖೆಗೆ ಒತ್ತಾಯಿಸಿದೆ. ಅಕ್ಟೋಬರ್ 9 ರಂದು ಅಹಮದಾಬಾದ್ ನ ಮೆಟ್ರೊಪಾಲಿಟನ್ ಕೋರ್ಟ್ ನಲ್ಲಿ ಜಯ್  ದಿ ವೈರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 
ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಪ್ರಕಟವಾಗಿರುವ ಲೇಖನದಿಂದಾಗಿ ತಮ್ಮ ಗೌರವ ಹಾಳಾಗಿದೆ, ಹೀಗಾಗಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿರುವುದಾಗಿ ತಿಳಿಸಿದ್ದಾರೆ. 
SCROLL FOR NEXT