ಭ್ರಷ್ಟಾಚಾರದ ಆರೋಪ, 3 ಪೊಲೀಸರಿಂದ ಶೌರ್ಯ ಪದಕ ವಾಪಸ್ ಪಡೆದ ಸರ್ಕಾರ
ನವದೆಹಲಿ: ಶೌರ್ಯ ಪ್ರಶಸ್ತಿಯನ್ನು ಪಡೆದಿದ್ದ ಮೂವರು ಪೊಲೀಸರಿಂದ ಭ್ರಷ್ಟಾಚಾರ ಹಾಗೂ ಇನ್ನಿತರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಶಸ್ತಿಗಳನ್ನು ವಾಪಸ್ ಪಡೆಯಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ.
ಮಧ್ಯಪ್ರದೇಶದ ಹಿಂದಿನ ಎಎಸ್ ಪಿ ಧರ್ಮೇಂದ್ರ ಚೌಧರಿ, ಪಂಜಾಬ್ ನ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಗುರ್ಮಿತ್ ಸಿಂಗ್ ಹಾಗೂ ಜಾರ್ಖಂಡ್ ನ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಲಲಿತ್ ಕುಮಾರ್ ಅವರ ವಿರುದ್ಧ ಭ್ರಷ್ಟಾಚಾರ ಸೇರಿದಂತೆ ಇನ್ನೂ ಹಲವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಶೌರ್ಯ ಪ್ರಶಸ್ತಿಗಳನ್ನು ವಾಪಸ್ ಪಡೆಯಲಾಗಿದೆ
ನಕಲಿ ಎನ್ ಕೌಂಟರ್ ನ್ನು ಯೋಜಿಸಿದ್ದಕ್ಕಾಗಿ ಚೌಧರಿ ಅವರ ಪ್ರಶಸ್ತಿಯನ್ನು ವಾಪಸ್ ಪಡೆಯಲಾಗಿದ್ದರೆ, ಕೊಲೆ ಪ್ರಕರಣವೊಂದರಲ್ಲಿ ಗುರ್ಮಿತ್ ಸಿಂಗ್ ಅವರ ಅಪರಾಧ ಸಾಬೀತಾಗಿದ್ದು ಪ್ರಶಸ್ತಿಯನ್ನು ವಾಪಸ್ ಪಡೆಯಲಾಗಿದ್ದು, ಲಲಿತ್ ಕುಮಾರ್ ವಿರುದ್ಧ ಭ್ರಷ್ಟಾಚಾರ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪ್ರಶಸ್ತಿಯನ್ನು ವಾಪಸ್ ಪಡೆಯಲಾಗಿದೆ.