ಸಿಪಿಇಸಿ 
ದೇಶ

ಸಿಪಿಇಸಿಗೆ ಭಾರತ ಅಪಾಯಕಾರಿ ಅಲ್ಲ, ಪಾಕಿಸ್ತಾನದ ಭ್ರಷ್ಟಾಚರವೇ ಸಮಸ್ಯೆ: ತಜ್ಞರು

ಚೀನಾ-ಪಾಕಿಸ್ತಾನದ ಮಹತ್ವಾಕಾಂಕ್ಷಿ ಯೋಜನೆ ಚೀನಾ ಪಾಕಿಸ್ತಾನ ಎಕೆನಾಮಿಕ್ ಕಾರಿಡಾರ್ (ಸಿಪಿಇಸಿ) ಯೋಜನೆಗೆ ಭಾರತ ಅಪಾಯಕಾರಿ ಅಲ್ಲ, ಬದಲಾಗಿ ಪಾಕಿಸ್ತಾನದಲ್ಲಿರುವ ಭ್ರಷ್ಟಾಚಾರವೇ ಸಮಸ್ಯೆ...

ನ್ಯೂಯಾರ್ಕ್: ಚೀನಾ-ಪಾಕಿಸ್ತಾನದ ಮಹತ್ವಾಕಾಂಕ್ಷಿ ಯೋಜನೆ ಚೀನಾ ಪಾಕಿಸ್ತಾನ ಎಕೆನಾಮಿಕ್ ಕಾರಿಡಾರ್ (ಸಿಪಿಇಸಿ) ಯೋಜನೆಗೆ ಭಾರತ ಅಪಾಯಕಾರಿ ಅಲ್ಲ, ಬದಲಾಗಿ ಪಾಕಿಸ್ತಾನದಲ್ಲಿರುವ ಭ್ರಷ್ಟಾಚಾರವೇ ಸಮಸ್ಯೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 
ಸಿಪಿಇಸಿ ಯೋಜನೆ ವಿಳಂಬಕ್ಕೆ ಎರಡೂ ಕಡೆಯಲ್ಲಿರುವ ಭ್ರಷ್ಟಾಚಾರವೇ ಕಾರಣ ಎಂದು ನ್ಯೂಯಾರ್ಕ್ ನ ಎಲ್ಐಯು ನಲ್ಲಿನ ಎಕೆನಾಮಿಕ್ಸ್ ವಿಭಾಗದ ಪ್ರೊಫೆಸರ್ ಪ್ಯಾನೊಸ್ ಮೌರ್ಡುಕೌಟಾಸ್ ಹೇಳಿದ್ದಾರೆ. ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಚೀನಾ ಹಾಗೂ ಪಾಕಿಸ್ತಾನದ ನಡುವಿನ ಪಾಲುದಾರಿಕೆ ಮರಳಿನಿಂದ ನಿರ್ಮಾಣವಾದ ಕೋಟೆಯಂತೆ ಕಾಣುತ್ತಿದೆ. ಸಿಪಿಇಸಿಯಲ್ಲಿನ ವಿಳಂಬ ಹಾಗೂ ಹೆಚ್ಚು ಖರ್ಚುಗಳು ಪಾಕಿಸ್ತಾನವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ್ದು, ಐಎಂಎಫ್ ಎದುರು ನಿಲ್ಲುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಿಪಿಇಸಿಗೆ ಭಾರತ ಅಪಾಯಕಾರಿ ಅಲ್ಲ ಬದಲಾಗಿ ಪಾಕಿಸ್ತಾನದ ಭ್ರಷ್ಟಾಚರವೇ ಸಮಸ್ಯೆಯಾಗಿದ್ದು ಈ ಯೋಜನೆಯಲ್ಲಿ ಭಾಗವಹಿಸಿರುವ ಇತರೆ ದೇಶಗಳೂ ಪರಿಸ್ಥಿತಿಯ ಬಗ್ಗೆ ಅಸಮಾಧಾನ ಹೊಂದಿವೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್