ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಚೀನಾ ಭಾರತದ ಶಕ್ತಿಯನ್ನು ಅರ್ಥಮಾಡಿಕೊಂಡಿದೆ, ಎಲ್ಲಾ ವಿವಾದಗಳೂ ಬಗೆಹರಿಯಲಿದೆ: ರಾಜನಾಥ್ ಸಿಂಗ್

ಚೀನಾದೊಂದಿಗೆ ಭಾರತ ಎದುರಿಸುತ್ತಿರುವ ವಿವಾದಗಳು ಬಗೆಹರಿಯಲಿದ್ದು, ಚೀನಾ ನಮ್ಮ ಶಕ್ತಿಯನ್ನು ಅರ್ಥಮಾಡಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ರಾಜನಾಥ್ ಸಿಂಗ್
Srinivas Rao BV
Updated On : 15 Oct 2017, 6:30 am
ನವದೆಹಲಿ: ಚೀನಾದೊಂದಿಗೆ ಭಾರತ ಎದುರಿಸುತ್ತಿರುವ ವಿವಾದಗಳು ಬಗೆಹರಿಯಲಿದ್ದು, ಚೀನಾ ನಮ್ಮ ಶಕ್ತಿಯನ್ನು ಅರ್ಥಮಾಡಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 
ಭಾರತ ಈ ಹಿಂದೆ ಇದ್ದಂತಿಲ್ಲ. ಭಾರತ ಈಗ ಶಕ್ತಿಯುತವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ವಿಷಯ ಚೀನಾಗೂ ಅರ್ಥವಾಗಿದ್ದು, ವಿವಾದವೊಂದು ಬಗೆಹರಿದಿದೆ ಎಂದು ಹೇಳಿದ್ದಾರೆ. ಲಖನೌ ಗೆ ಭೇಟಿ ನೀಡಿದ್ದ ವೇಳೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ರಾಜನಾಥ್ ಸಿಂಗ್ ಪಾಕಿಸ್ತಾನದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದು, ಭಯೋತ್ಪಾದಕರನ್ನು ಭಾರತದೊಳಗೆ ಕಳಿಸಲು ಸತತ ಪ್ರಯತ್ನ ನಡೆಸುತ್ತಿದೆ. ಆದರೆ ಪ್ರತಿ ಬಾರಿಯೂ ಭಾರತದ ಯೋಧರು ಈ ಪ್ರಯತ್ನವನ್ನು ವಿಫಲಗೊಳಿಸುತ್ತಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement