ಹೈ-ಸ್ಪೀಡ್ ರೈಲು 
ದೇಶ

ಭಾರತದಲ್ಲಿ ಚೀನಾ ಹೈಸ್ಪೀಡ್ ರೈಲು ಯೋಜನೆಗೆ ಡೊಕ್ಲಾಂ ವಿವಾದ ಅಡ್ಡಿ?

ದಕ್ಷಿಣ ಭಾರತದಲ್ಲಿ ಒಂದು ವರ್ಷದ ಹಿಂದೆಯೇ ಕಾರ್ಯಸಾಧ್ಯತೆಯ ಅಧ್ಯಯನ ಪೂರ್ಣಗೊಂಡಿದ್ದ ಮಹತ್ವಕಾಂಕ್ಷಿಯಾ ಹೈ-ಸ್ಪೀಡ್ ಯೋಜನೆ ತಡವಾಗುತ್ತಿದ್ದು ಡೋಕ್ಲಾಂ...

ನವದೆಹಲಿ: ದಕ್ಷಿಣ ಭಾರತದಲ್ಲಿ ಒಂದು ವರ್ಷದ ಹಿಂದೆಯೇ ಕಾರ್ಯಸಾಧ್ಯತೆಯ ಅಧ್ಯಯನ ಪೂರ್ಣಗೊಂಡಿದ್ದ ಮಹತ್ವಕಾಂಕ್ಷಿಯಾ ಹೈ-ಸ್ಪೀಡ್ ಯೋಜನೆ ತಡವಾಗುತ್ತಿದ್ದು ಡೋಕ್ಲಾಂ ವಿವಾದದಿಂದಾಗಿ ಚೀನಾ ಯೋಜನೆಗೆ ಮುಂದಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. 
ಮುಖ್ಯವಾಗಿ 492 ಕಿ.ಮೀ ಉದ್ದದ ಚೆನ್ನೈ-ಬೆಂಗಳೂರು-ಮೈಸೂರು ಕಾರಿಡಾರ್ ಯೋಜನೆ ಸೇರಿದಂತೆ ಒಟ್ಟಾರೆ ಒಂಬತ್ತು ಹೈ-ಸ್ಪೀಡ್ ರೈಲು ಯೋಜನೆಗೆ ವರದಿಯನ್ನು ತಯಾರಿಸಲಾಗಿತ್ತು. ಆದರೆ ಚೀನಾದ ರೈಲ್ವೆ ಸಚಿವಾಲಯದ ಜತೆಗೆ ಸ್ಪಂದನೆಗೆ ಪ್ರತಿಕ್ರಿಯಿಸಲು ವಿಫಲವಾಗಿದೆ. 
2016ರ ನವೆಂಬರ್ ತಿಂಗಳಲ್ಲೇ ಹೈ-ಸ್ಪೀಡ್ ರೈಲು ಯೋಜನೆಯ ಅಂತಿಮ ವರದಿಯನ್ನು ಚೀನಾ ಕಂಪನಿ ಸಲ್ಲಿಸಿತ್ತು. ತದನಂತರ ನೇರಾ-ನೇರಾ ಮಾತುಕತೆ ಮಾಡುವುದಾಗಿ ಕಂಪನಿ ಹೇಳಿತ್ತು. ಆದರೆ ಇಲ್ಲಿಯವರೆಗೂ ಮಾಕುಕತೆಯ ದಿನಾಂಕವನ್ನು ನಿಗದಿಪಡಿಸಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. 
ಚೀನಾ ರೈಲ್ವೆಯ ಪ್ರತಿಕ್ರಿಯೆ ಕೊರತೆಯಿಂದಾಗಿ ಈ ಮಹತ್ವಕಾಂಕ್ಷಿಯ ಯೋಜನೆ ಹಳ್ಳ ಹಿಡಿಯುತ್ತಿದೆ. 2016ರಲ್ಲಿ ಚೀನಾ ರೈಲ್ವೆ ಎರುವಾನ್ ಎಂಜಿನಿಯರಿಂಗ್ ಗ್ರೂಪ್ ಕಂ ಲಿಮಿಟೆಡ್(ಸಿಆರ್ಇಇಸಿ) ಯೋಜನೆಯ ಸಂಪೂರ್ಣ ವರದಿಯನ್ನು ಸಲ್ಲಿಸಿತ್ತು. ಇದಾದ ಬಳಿಕ ಚೀನಾ ಸಂಸ್ಥೆ ರೈಲ್ವೆ ಮಂಡಳಿ ಜತೆ ಮಾತುಕತೆ ನಡೆಸುವುದಾಗಿ ಹೇಳಿತ್ತು. 
ಕಳೆದ ಆರು ತಿಂಗಳುಗಳಲ್ಲಿ ಇ-ಮೇಲ್ ಗಳ ಮೂಲಕ ಪುನರಾವರ್ತಿತ ಸಂವಹನಗಳನ್ನು ಕಳುಹಿಸಿದ್ದರೂ ಸಹ ಸಿಆರ್ಇಇಸಿನ ಅಧಿಕಾರಿಗಳೊಂದಿಗೆ ಮಂಡಳಿ ಸಂಪರ್ಕದಲ್ಲಿರಲು ಸಾಧ್ಯವಾಗಲಿಲ್ಲ. ಇನ್ನು ಅಲ್ಲಿನ ರಾಯಭಾರಿ ಕಚೇರಿ ಮೂಲಕ ನಾವು ಅವರೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸಿದ್ದೇವೆ, ಆದರೆ ಅವರಿಂದ ಯಾವುದೇ ರೀತಿಯ ಸ್ಪಂದನೆ ಬರುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೂನ್ 16 ರಿಂದ ಆಗಸ್ಟ್ 28ರವರೆಗೂ ಡೋಕ್ಲಾಂ ವಿವಾದದಿಂದಾಗಿ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿತ್ತು. ಈ ಹಿನ್ನಲೆಯಲ್ಲಿ ಯೋಜನೆ ಹಳ್ಳಿತಪ್ಪುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆಪತ್ರಿಕೆ ಸೋರಿಕೆ,'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!