ತಾಜ್ ಮಹಲ್ 
ದೇಶ

ತಾಜ್'ಮಹಲ್ ನಿರ್ಮಿಸಿದವರು ದ್ರೋಹಿಗಳು, ಭಾರತೀಯ ಸಂಸ್ಕೃತಿಗೆ ಅದೊಂದು ಕಪ್ಪುಚುಕ್ಕೆ: ಬಿಜೆಪಿ ಶಾಸಕ

ವಿಶ್ವದ ಪ್ರಸಿದ್ಧ ಸ್ಮಾರಕಗಗಳಲ್ಲಿ ಒಂದಾಗಿರುವ ಹಾಗೂ ಪ್ರೇಮ ಸೌಧವೆಂದು ಖ್ಯಾತಿ ಪಡೆದುಕೊಂದಿರುವ ಆಗ್ರಾದ ತಾಜ್ ಮಹಲ್ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಹಾಗೂ ಕೆಟ್ಟ ಸುದ್ದಿಗಳಿಗಾಗಿ...

ಲಖನೌ: ವಿಶ್ವದ ಪ್ರಸಿದ್ಧ ಸ್ಮಾರಕಗಗಳಲ್ಲಿ ಒಂದಾಗಿರುವ ಹಾಗೂ ಪ್ರೇಮ ಸೌಧವೆಂದು ಖ್ಯಾತಿ ಪಡೆದುಕೊಂದಿರುವ ಆಗ್ರಾದ ತಾಜ್ ಮಹಲ್ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಹಾಗೂ ಕೆಟ್ಟ ಸುದ್ದಿಗಳಿಗಾಗಿ ಮುಖ್ಯ ಶೀರ್ಷಿಕೆಯಲ್ಲಿ ರಾರಾಜಿಸುವಂತಾಗಿದೆ. 
ಉತ್ತರಪ್ರದೇಶ ಸರ್ಕಾರ ಇತ್ತೀಚೆಗಷ್ಟೇ ತನ್ನ ರಾಜ್ಯ ಪ್ರವಾಸೋದ್ಯಮ ಕೈಪಿಡಿಯಿಂದ ತಾಜ್ ಮಹಲ್ ನ್ನು ಕೈಬಿಟ್ಟಿತ್ತು. ಇದರ ಪರಿಣಾಮ ಇದೀರ ಭಾರೀ ಟೀಕೆ, ವಿವಾದಗಳು ಸೃಷ್ಟಿಯಾಗತೊಡಗಿದೆ.
ತಾಜ್ ಮಹಲ್ ಕುರಿತಂತೆ ಪರ ಹಾಗೂ ವಿರೋಧಗಳ ಟೀಕೆಗಳು ಒಂದೆಡೆಯಾಗಿದ್ದರೆ, ಮತ್ತೊಂದೆಡೆ ರಾಜಕೀಯ ಕೆಸರೆರಚಾಟಗಳು ಆರಂಭಗೊಂಡಿವೆ. 
ತಾಜ್ ಮಹಲ್ ನಿರ್ಮಿಸಿದವರು ದ್ರೋಹಿಗಳು ಹಾಗೂ ತಾಜ್ ಮಹಲ್ ಭಾರತೀಯ ಸಂಸ್ಕೃತಿಯಲ್ಲಿ ಕಪ್ಪುಚುಕ್ಕೆಯಾಗಿದೆ ಎಂದು ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು ಹೇಳಿಗೆ ನೀಡಿದ್ದು, ಇದೀಗ ವಿವಾದಕ್ಕೆ ಗುರಿಯಾಗಿದೆ. 
ಮೀರುತ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಉತ್ತರಪ್ರದೇಶ ಪ್ರವಾಸೋದ್ಯಮ ಕೈಪಿಡಿಯಿಂದ ತಾಜ್'ಮಹಲ್ ಕೈಬಿಟ್ಟಿರುವುದಕ್ಕೆ ಬಹಳಷ್ಟು ಜನರಿಗೆ ಬೇಸರವಾಗಿದೆ. ಯಾವ ಇತಿಹಾಸದ ಬಗ್ಗೆ ನಾವು ಮಾತನಾಡುತ್ತಿದ್ದೇವೆ? ತಾಜ್ ಮಹಲ್ ಕಟ್ಟಿಸಿದ್ದ ಷಹಜಹಾನ್ ತನ್ನ ತಂದೆಯನ್ನೇ ಜೈಲಿಗಟ್ಟಿದ್ದ. ಹಿಂದೂಗಳನ್ನು ಇಲ್ಲವಾಗಿಸಲು ಬಯಸಿದ್ದ. ಇಂಥಹ ವ್ಯಕ್ತಿಗಳು ನಮ್ಮ ಇತಿಹಾಸದ ಭಾಗವಾದರೆ, ಇದು ಬಹಳ ಬೇಸರದ ಸಂಗತಿ. ಇಂತಹ ಇತಿಹಾಸವನ್ನು ನಾವು ಬದಲಿಸುತ್ತೇವೆಂದು ಹೇಳಿದ್ದಾರೆ. 

ತಾಜ್ ಮಹಲ್ ಕಟ್ಟಡವನ್ನು ನಿರ್ಮಿಸಿದವರು ದ್ರೋಹಿಗಳಾಗಿದ್ದು, ಹೀಗಾಗಿ ಅದಕ್ಕೆ ಭಾರತೀಯ ಇತಿಹಾಸದಲ್ಲಿ ಯಾವುದೇ ಸ್ಥಾನವಿಲ್ಲ. ತಾಜ್ ಮಹಲ್ ಭಾರತೀಯ ಸಂಸ್ಕೃತಿಯಲ್ಲಿನ ಒಂದು ಕಪ್ಪು ಚುಕ್ಕೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯವು ಭಯೋತ್ಪಾದಕರ ಕಾರಸ್ಥಾನವಾಗಿದೆ ಎಂದು ಆರೋಪಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT