ದೇಶ

ದೆಹಲಿ: ದೀಪಾವಳಿಗೆ ಮುನ್ನ 1200 ಕೆಜಿ ಪಟಾಕಿ ವಶ, ಆನ್ ಲೈನ್ ಮಾರಾಟ ರದ್ದು

Sumana Upadhyaya
ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಈ ವರ್ಷ ಪಟಾಕಿಗಳ ಮಾರಾಟಕ್ಕೆ ನಿಷೇಧ ಹೇರಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದರು ಕೂಡ ನಿಯಮವನ್ನು ಉಲ್ಲಂಘಿಸಿದ್ದ 29 ಮಂದಿಯನ್ನು ಬಂಧಿಸಿದ ದೆಹಲಿ ಪೊಲೀಸರು 1200 ಕಿಲೋ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.
ನವೆಂಬರ್ 1ರವರೆಗೆ ರಾಜಧಾನಿ ದೆಹಲಿಯಲ್ಲಿ ಯಾವುದೇ ಪಟಾಕಿ ಅಂಗಡಿಗಳನ್ನು ತೆರೆಯಲು ಬಿಡುವುದಿಲ್ಲ. ನಾವು 1,200 ಕೆಜಿಗೂ ಅಧಿಕ ಪಟಾಕಿಗಳನ್ನು ವಶಪಡಿಸಿಕೊಂಡಿದ್ದು ಇಲ್ಲಿಯವರೆಗೆ 29 ಮಂದಿಯನ್ನು ಬಂಧಿಸಲಾಗಿದೆ. ನಿನ್ನೆ ಅನೇಕ ಪಟಾಕಿ ಅಂಗಡಿಗಳನ್ನು ಒತ್ತಾಯಪೂರ್ವಕವಾಗಿ ಮುಚ್ಚಿಸಿದ್ದೇವೆ ಎಂದು ದೆಹಲಿ ಪೊಲೀಸ್ ವಕ್ತಾರ ಮದೂರ್ ವರ್ಮ ತಿಳಿಸಿದ್ದಾರೆ.
ನಾವು ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನು ಪಾಲಿಸುತ್ತೇವೆ. ಆದೇಶವನ್ನು ಉಲ್ಲಂಘಿಸಿ ಪಟಾಕಿಗಳನ್ನು ಮಾರಾಟ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಪೊಲೀಸರು ಜಾಗೃತರಾಗಿ ಯಾರು ಕೂಡ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸದಂತೆ ನೋಡಿಕೊಳ್ಳುತ್ತಾರೆ ಎಂದು ವರ್ಮ ಹೇಳಿದ್ದಾರೆ.
ಆನ್ ಲೈನ್ ಮೂಲಕ ಕೂಡ ಪಟಾಕಿಗಳ ಮಾರಾಟವನ್ನು ದೆಹಲಿಯಲ್ಲಿ ನಿಷೇಧಿಸಲಾಗಿದೆ. 
SCROLL FOR NEXT