ಬೆಂಕಿ ದುರಂತಕ್ಕೀಡಾಗಿರುವ ಬೃಹತ್ ಕಟ್ಟಡ 
ದೇಶ

ಕೋಲ್ಕತಾ ಎಲ್ ಐಸಿ ಕಚೇರಿ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ!

ಕೊಲ್ಕತ್ತಾದ ಜವಾಹರ್ ಲಾಲ್ ನೆಹರು ರಸ್ತೆಯ ಎಲ್‌ಐಸಿ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 10 ಅಗ್ನಿ ಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕೋಲ್ಕತಾ: ಕೊಲ್ಕತ್ತಾದ ಜವಾಹರ್ ಲಾಲ್ ನೆಹರು ರಸ್ತೆಯ ಎಲ್‌ಐಸಿ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 10 ಅಗ್ನಿ ಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ  ನಡೆಸುತ್ತಿದ್ದಾರೆ.
19 ಮಹಡಿಗಳ ಜೀವನ ಸುಧಾ ಕಟ್ಟಡದಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ 16ನೇ ಮಹಡಿಯಲ್ಲಿರುವ ಎಸ್ ಬಿಐ ಬ್ಯಾಂಕ್ ನ ಗ್ಲೋಬಲ್ ಮಾರ್ಕೆಟ್ ಕಚೇರಿಯ ಸರ್ವರ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,  ಕ್ರಮೇಣ ಬೆಂಕಿಯ ತೀವ್ರತೆ ವ್ಯಾಪಕವಾಗಿದೆ.  ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮೂಲಗಳ ಪ್ರಕಾರ ಸರ್ವರ್ ರೂಂಮಿಗೆ  ಸೀಮಿತವಾಗಿದ್ದ ಬೆಂಕಿ ಬಳಿಕ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಂಡು ಕಟ್ಟಡದ ಇತರೆ ಕೊಠಡಿಗಳಿಗೂ ಹಬ್ಬಿದೆ.
ಪರಿಣಾಮ ಕಟ್ಟಡಗಳಲ್ಲಿದ್ದ ಮಹತ್ವದ ಕಟ್ಟಡಗಳು ಸುಟ್ಟುಕುರಕಲಾಗಿವೆ. ಈ ಜೀವನ್ ಸುಧಾ ಕಟ್ಟಡದಲ್ಲಿ ಜೀವ ವಿಮಾ ನಿಗಮ, ಎಸ್ ಬಿಐ ಮತ್ತು ಇತರೆ ಹಣಕಾಸು ಸಂಸ್ಥೆಗಳ ಕಾರ್ಯಾಲಯಗಳು ಕಾರ್ಯನಿರ್ವಹಿಸುತ್ತಿದ್ದವು  ಎಂದು ತಿಳಿದುಬಂದಿದೆ. ಇನ್ನು ಅಗ್ನಿ ಅವಘಡದಲ್ಲಿ ಯಾವುದೇ ರೀತಿಯ ಸಾವು-ನೋವು ಸಂಭವಿಸಿದ ಕುರಿತು ವರದಿಯಾಗಿಲ್ಲ. ಕಟ್ಟಡದಲ್ಲಿ ಇತರೆ ಕಾರ್ಮಿಕರು ಸಿಲುಕಿದ್ದಾರೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT