ದೇಶ

ಬ್ರಾಹ್ಮಣ ಅರ್ಚಕರ ವಿವಾಹವಾದರೆ ರೂ.3 ಲಕ್ಷ: ತೆಲಂಗಾಣ ಸರ್ಕಾರ ಹೊಸ ಸ್ಕೀಂ!

Manjula VN
ಹೈದರಾಬಾದ್: ಸಾಫ್ಟ್'ವೇರ್ ಇಂಜಿನಿಯರ್ ಗಳು, ಅಮೆರಿಕ ಹಾಗೂ ಲಂಡನ್ ನಲ್ಲಿರುವ ವೈದ್ಯರನ್ನು ವಿವಾಹವಾಗಲು ಇಚ್ಛಿಸುತ್ತಿರುವ ಬ್ರಾಹ್ಮಣ ಸಮುದಾಯದ ಹುಡುಗಿಯರು, ಇಂದು ಪಂಡಿತರು ಹಾಗೂ ಅರ್ಚಕರನ್ನು ವಿವಾಹವಾಗಲು ಇಷ್ಟಪಡುತ್ತಿಲ್ಲ. ಹೀಗಾಗಿ ತೆಲಂಗಾಣ ಸರ್ಕಾರವೇ ಇದಕ್ಕೆ ಕ್ರಮ ಕೈಗೊಳ್ಳಲು ಮುಂದಾಗಿದೆ. 
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಕ್ರಮ ಕೈಗೊಂಡಿದ್ದು ವಿಶಿಷ್ಠ ಆಫರ್ ವೊಂದನ್ನು ಪ್ರಕಟಿಸಿದ್ದಾರೆ. 
ಬ್ರಾಹ್ಮಣ ವೇದ ಪಂಡಿತರು/ಅರ್ಚಕರನ್ನು ವಿವಾಹವಾಗುವ ಕನ್ಯೆಯರಿಗೆ ರೂ.3 ಲಕ್ಷ ಇನಾಮು ನೀಡುವುದಾಗಿ ಘೋಷಣೆ ಮಾಡಿದ್ದಾರೆ. 
ವರನು ಬ್ರಾಹ್ಮಣ ಅರ್ಚಕರನಾಗಿದ್ದರೆ, ಸರ್ಕಾರವು ಮದುವೆಯಾಗುವ ಜೋಡಿಯ ಹೆಸರಿನಲ್ಲಿ ಜಂಟಿ ಫಿಕ್ಸೆಡ್ ಡೆಪಾಸಿಟ್ (ಎಫ್'ಡಿ) ಖಾತೆ ತೆಗೆದು ರೂ.3 ಲಕ್ಷ ನೀಡಲಿದೆ. ಇದರ ಜೊತೆಗೆ ಈ ಜೋಡಿಯೆ ಮದುವೆಗೆ ರೂ.1 ಲಕ್ಷ ನೀಡಲಾಗುತ್ತದೆ. ಎಫ್ ಡಿ ಇಡಲಾಗಿರುವ ಠೇವಣಿಯು 3 ವರ್ಷದ್ದಾಗಿದ್ದು, ಆ ಬಳಿಕವಷ್ಟೇ ಜೋಡಿಯು ಹಣವನ್ನು ಹಿಂತೆಗೆಯಬಹುದಾಗಿದೆ ಎಂದು ತಿಳಿದುಬಂದಿದೆ. 
SCROLL FOR NEXT