ಕೊಲ್ಲಂ(ಕೇರಳ): ಶಿಕ್ಷಕರ ಕಿರುಕುಳದಿಂದ ಬೇಸತ್ತು ಶಾಲಾ ಕಟ್ಟಡದಿಂದ ಜಿಗಿದಿದ್ದ ಶಾಲಾ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ಕಳೆದ ಶುಕ್ರವಾರ ಕೊಲ್ಲಂನ ಫಾತಿಮಾ ರಸ್ತೆಯಲ್ಲಿನ ಟ್ರಿನಿಟಿ ಲೈಸಿಯಮ್ ಶಾಲೆಯಲ್ಲಿ ಓದುತ್ತಿದ್ದ 15 ವರ್ಷದ ಗೌರಿ ಸ್ನೇಹ ಶಾಲೆಯ ಮೂರನೇ ಮಹಡಿಯಿಂದ ಜಿಗಿದಿದ್ದಳು.
ಮೃತ ವಿದ್ಯಾರ್ಥಿನಿ ಗೌರಿ ಸ್ನೇಹ ಮತ್ತೊಬ್ಬ ವಿದ್ಯಾರ್ಥಿನಿ ಜತೆ ಜಗಳವಾಡುತ್ತಿದ್ದಾಗ ಇಬ್ಬರು ಶಿಕ್ಷಕರು ಆಕೆಯ ವರ್ತನೆಯನ್ನು ಖಂಡಿಸಿ ಬೈದಿದ್ದಾರೆ. ಇದರಿಂದ ನೊಂದ ವಿದ್ಯಾರ್ಥಿನಿ ಶಾಲಾ ಕಟ್ಟಡದಿಂದ ಜಿಗಿದಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಕೂಡಲೇ ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ವಿದ್ಯಾರ್ಥಿನಿಯ ತಂದೆ ದೂರಿನ ಮೇಲೆ ಕೊಲ್ಲಂ ಪೊಲೀಸರು ಇಬ್ಬರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿ ದ್ದು ಘಟನೆ ನಡೆದ ಬಳಿಕ ಇಬ್ಬರು ಶಿಕ್ಷಕರು ತಲೆಮರೆಸಿಕೊಂಡಿದ್ದಾರೆ.