ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಬಂಧನದಲ್ಲಿದ್ದ ಬಿಜೆಎಂ ಮುಖಂಡ ಬರುನ್ ಭುಜೇಲ್ ಸಾವು

ಗೋರ್ಖಾ ಜನಮುಕ್ತಿ ಮೋರ್ಚಾ(ಬಿಜೆಎಂ)ಮುಖಂಡ ಬರುನ್ ಭುಜೇಲ್ ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ...

ಬರುನ್ ಭುಜೇಲ್
Vishwanath S
Updated On : 25 Oct 2017, 4:49 am
ಕೋಲ್ಕತ್ತಾ: ಗೋರ್ಖಾ ಜನಮುಕ್ತಿ ಮೋರ್ಚಾ(ಬಿಜೆಎಂ)ಮುಖಂಡ ಬರುನ್ ಭುಜೇಲ್ ಎಸ್ಎಸ್ಕೆಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 
ಡಾರ್ಜಿಲಿಂಗ್ ಅಶಾಂತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಬರುನ್ ಭುಜೇಲ್ ರನ್ನು ಆಗಸ್ಟ್ ನಲ್ಲಿ ಬಂಧಿಸಿ ಸಿಲಿಗುರಿ ಜೈಲಿನಲ್ಲಿ ಇರಿಸಿದ್ದರು. ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಕೊಡಿಸಲು ಪೊಲೀಸರು ವಿಳಂಬ ಮಾಡಿರುವುದರಿಂದ ಭುಜೇಲ್ ಮೃತಪಟ್ಟಿದ್ದಾರೆ ಎಂದು ಅವರ ಸಂಬಂಧಿಕರು ಆರೋಪಿಸಿದ್ದರೆ ಜಿಜೆಎಂ ಮುಖ್ಯಸ್ಥ ಬಿಮಲ್ ಗುರುಂಗ್ ಅವರು ಭುಜೇಲ್ ಪೊಲೀಸರ ಕಿರುಕುಳದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. 
ಎಸ್ಎಸ್ಕೆಎಂ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಮಣಿಮೋಯ್ ಬಂಡೋಪಾಧ್ಯಾಯ ಅವರು ಭುಜೇಲ್ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ತರೆದುಕೊಂಡು ಬಂದಾಗಲೇ ಅವರ ಸ್ಥಿತಿ ಗಂಭೀರವಾಗಿತ್ತು ಎಂದು ಹೇಳಿದ್ದಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement