ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ
ಲಖನೌ: ದಲಿತರು, ಬುಡಕಟ್ಟು ಜನಾಂಗದವರು ಹಾಗೂ ಹಿಂದುಳಿದ ಜನರ ಕುರಿತಂತೆ ಬಿಜೆಪಿ ತನ್ನ ದುರ್ನಡತೆಯನ್ನು ಸರಿಪಡಿಸಿಕೊಳ್ಳದಿದ್ದರೆ, ಧರ್ಮವನ್ನು ಬದಲಿಸಿಕೊಂಡು ಡಾ.ಬಿ.ಆರ್. ಅಂಬೇಡ್ಕರ್ ಅವರ ದಾದಿಯಲ್ಲಿ ನಡೆಯುತ್ತೇನೆಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಮಂಗಳವಾರ ಹೇಳಿದ್ದಾರೆ.
ಅಜಂಗರ್ಹ್ ನಲ್ಲಿ ಬಿಜೆಪಿ ಬೆಂಬಲಿಗರನ್ನುದ್ದೇಶಿ ಮಾತನಾಡಿರುವ ಅವರು, ಶಂಕರಾರ್ಯರು, ಹಿಂದೂ ಧರ್ಮಾಧಿಕಾರಿಗಳು ಮತ್ತು ಬಿಜೆಪಿ-ಆರ್'ಎಸ್ಎಸ್ ನವರಿಗೆ ಒಂದು ಅವಕಾಶವನ್ನು ನೀಡುತ್ತಿದ್ದೇನೆ. ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದ ವರ್ಗದವರು ಹಾಗೂ ಧರ್ಮವನ್ನು ಬದಲಿಸಿಕೊಂಡ ಜನರ ಕುರಿತಂತೆ ತಮ್ಮ ದುರ್ನಡೆಯನ್ನು ಬದಲಿಸಿಕೊಳ್ಳದೇ ಹೋದರೆ, ನನಗೆ ಬೇರಾವುದೇ ಆಯ್ಕೆಗಳಿಲ್ಲ. ಧರ್ಮವನ್ನು ಬದಲಿಸಿಕೊಂಡು ಅಂಬೇಡ್ಕರ್ ಅವರು ನಡೆದ ಹಾದಿಯಲ್ಲಿಯೇ ನಡೆಯುತ್ತೇನೆಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಹರಿಹಾಯ್ದಿರುವ ಅವರು, ಅಯೋಧ್ಯೆಯಲ್ಲಿ ದೇಗುಲ ನಿರ್ಮಾಣಗೊಂಡರೂ ಅದರಿಂದ ದಲಿತರು ಹಾಗೂ ಹಿಂದುಳಿದವರಿಗೆ ಯಾವುದೇ ರೀತಿಯ ಸಹಾಯವಾಗುವುದಿಲ್ಲ. ಯೋಗಿ ಆದಿತ್ಯನಾಥ್ ಅವರು ದೇಗುಲಗಳಿಗೆ ಭೇಟಿ ನೀಡುವ ಬದಲು ರಾಜ್ಯದ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಗಮನ ಹರಿಸಬೇಕಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics