ದೇಶ

ತಾಜ್ ಮಹಲ್ ನಲ್ಲಿ ನಮಾಜ್ ಮಾಡುವುದನ್ನು ರದ್ಧುಗೊಳಿಸಿ: ಆರ್ ಎಸ್ ಎಸ್ ಅಂಗಸಂಸ್ಥೆ

Shilpa D
ನವದೆಹಲಿ: ಜಗತ್ತಿನ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾಗಿರುವ ತಾಜ್ ಮಹಲ್ ನಲ್ಲಿ ಶುಕ್ರವಾರ ನಮಾಜ್ ಮಾಡುವುದನ್ನು ರದ್ದುಗೊಳಿಸಬೇಕು ಎಂದು ಆರ್ ಎಸ್ ಎಸ್ ನ ಅಂಗಸಂಸ್ಥೆ ಆಗ್ರಹಿಸಿದೆ. 
ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯ ಅಂಗಸಂಸ್ಥೆಯಾದ ಅಖಿಲ ಭಾರತೀಯ ಇತಿಹಾಸ ಸಂಕಲನ  ಸಮಿತಿ ಆಗ್ರಾದಲ್ಲಿರುವ ತಾಜ್ ಮಹಲ್ ರಾಷ್ಟ್ರೀಯ ಪರಂಪರೆಯ ಧ್ಯೋತಕವಾಗಿದೆ. ಹೀಗಿರುವಾಗ ತಾಜ್ ಮಹಲ್ ಅನ್ನು ಮುಸ್ಲಿಮರು  ಧಾರ್ಮಿಕ ಸ್ಥಳವನ್ನಾಗಿ ಮಾಡುವುದನ್ನು ನಿಲ್ಲಿಸಬೇಕೆಂದು ಸಮಿತಿಯ ಸಂಘಟನಾ ಕಾರ್ಯದರ್ಶಿ ಡಾ. ಬಾಲ್ಮುಕುಂದ್ ಪಾಂಡೆ ಆಗ್ರಹಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 
ಟಿವಿ ಚಾನೆಲ್ ವೊಂದರಲ್ಲಿ ಮಾತನಾಡಿರುವ ಅವರು, ತಾಜ್ ಮಹಲ್ ನಲ್ಲಿ ನಮಾಜ್ ಮಾಡುವುದನ್ನು ರದ್ಧುಗೊಳಿಸಿ, ಇಲ್ಲವೇ  ಹಿಂದೂಗಳಿಗೆ ಶಿವನ ಪ್ರಾರ್ಥನೆ ಮಾಡಲು ಅವಕಾಶ ನೀಡಿ ಎಂದು ಹೇಳಿದ್ದಾರೆ.
ತಾಜ್ ಮಹಲ್ ಆವರಣದಲ್ಲಿ ಶಿವ ಚಾಲೀಸಾ ಪಠಿಸುತ್ತಿದ್ದ ಹಿಂದೂ ಯುವ ವಾಹಿನಿ ಕಾರ್ಯಕರ್ತರನ್ನು ಬಂಧಿಸಲಾಗಿತ್ತು, ನಂತ ಮೌಖಿಕವಾಗಿ ಕ್ಷಮಾಪಣೆ ಕೇಳಿದ ನಂತರ ಬಿಡುಗಡೆಗೊಳಿಸಲಾಗಿದೆ.
SCROLL FOR NEXT