ಘಾಜಿಯಾಬಾದ್: ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ವಿನೋದ್ ವರ್ಮಾ ಅವರನ್ನು ಘಾಜಿಯಾಬಾದ್ ಪೊಲೀಸರು ಇಂದು ಬಂಧಿಸಿದರು.
ಘಾಜಿಯಾಬಾದ್ ನ ಇಂದಿರಾಪುರಂನಲ್ಲಿರುವ ಅವರನಿವಾಸದಿಂದ ಅವರನ್ನು ಪೋಲೀಸರು ಬಂಧಿಸಿದ್ದಾರೆ.
ಬಿಬಿಸಿಯ ಮಾಜಿ ಸಂಪಾದಕ ಮತ್ತು ಅಮರ ಉಜಾಲಾ ಡಿಜಿಟಲ್ ನ ಸಂಪಾದಕ ವಿನೋದ್ ವರ್ಮಾ ಅವರನ್ನು ಪೋಲೀಸರು ಬಂಧಿಸಿದ್ದು ಅವರ ಮನೆಯಿಂದ 300 ಸಿಡಿ ಮತ್ತು 1 ಪೆನ್ ಡ್ರೈವ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಛತ್ತೀಸಘಡದಲ್ಲಿ ಇತ್ತೀಚೆಗೆ ನಡೆದ ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಮಾಹಿತಿ ಕಲೆಹಾಕುವ ತಂಡದಲ್ಲಿ ವಿನೋದ್ ವರ್ಮಾ ಕೂಡ ಇದ್ದರು.ಅವರು ಛತ್ತೀಸಘಡದ ಮಂತ್ರಿಯೊಬ್ಬರ ವಿರುದ್ಧ ಕುಟುಕು ಕಾರ್ಯಾಚರಣೆ ನಡೆಸುತ್ತಿದ್ದರೆಂದು ಹೇಳಲಾಗುತ್ತಿದೆ ಆದರೂ ಬಂಧನದ ಹಿಂದಿನ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ವಿನೋದ್ ಬಂಧನ ಪತ್ರಿಕೋದ್ಯಮದ ಮೇಲಿನ ಪ್ರಹಾರ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎನ್ನಲಾಗುತ್ತಿದೆ.