ಸಂಗ್ರಹ ಚಿತ್ರ 
ದೇಶ

ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನು ದೂರ ಹೋದಷ್ಟು ಮಾತ್ರ ಟೋಲ್ ಶುಲ್ಕ!

ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ ಪಾವತಿ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತರಲು ನಿರ್ಧರಿಸಿದ್ದು, ಇನ್ನು ಮುಂದೆ ವಾಹನ ಸವಾರರು ತಾವು ಸಾಗುವ ದೂರಕ್ಕೆ ಮಾತ್ರ ಟೋಲ್ ಶುಲ್ಕ ಪಾವತಿ ಮಾಡಿದರೆ ಸಾಕು..

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ ಪಾವತಿ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತರಲು ನಿರ್ಧರಿಸಿದ್ದು, ಇನ್ನು ಮುಂದೆ ವಾಹನ ಸವಾರರು ತಾವು ಸಾಗುವ ದೂರಕ್ಕೆ ಮಾತ್ರ ಟೋಲ್ ಶುಲ್ಕ  ಪಾವತಿ ಮಾಡಿದರೆ ಸಾಕು..
ಹೌದು..ಇಂತಹುದೊಂದು ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಗುವ ವಾಹನಗಳು ತಾವು ಸಾಗಿದ ದೂರಕ್ಕೆ ಮಾತ್ರ ಶುಲ್ಕ ಪಾವತಿಸುವಂಥ ಹೊಸ ವ್ಯವಸ್ಥೆಯನ್ನು  ಜಾರಿಗೆ ತರಲು ಮುಂದಾಗಿದೆ. ಈ ಬಗ್ಗೆ ಕೇಂದ್ರ ಸಾರಿಗೆ ಇಲಾಖೆಯ ಕಾರ್ಯದರ್ಶಿ ಯುದ್ ವೀರ್ ಸಿಂಗ್‌ ಮಲಿಕ್‌ ಅವರು ಶುಕ್ರವಾರ ಮಾಹಿತಿ ನೀಡಿದ್ದು, ಟೋಲ್‌ ವ್ಯವಸ್ಥೆಯಲ್ಲೇ ವಿನೂತನ ಹೆಜ್ಜೆಯೆಂದು ಹೇಳಲಾಗುವ  "ಇಂಟಲಿಜೆನ್ಸ್‌ ಟ್ರಾನ್ಸ್‌ಪೊàರ್ಟ್‌ ಮ್ಯಾನೇಜ್‌ಮೆಂಟ್‌' ಎಂಬ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ರೂಪಿಸುತ್ತಿದ್ದು, ಮುಂದಿನ ವರ್ಷ ಈ ವ್ಯವಸ್ಥೆ ಜಾರಿಗೆ ಬರಲಿದೆ.
ಈಗ ಸದ್ಯಕ್ಕೆ ಚಾಲ್ತಿಯಲ್ಲಿರುವ ಟೋಲ್‌ ಪದ್ಧತಿಯನ್ನು ಮುಂದಿನ ವರ್ಷದಿಂದ ಕೈಬಿಡಲು ನಿರ್ಧರಿಸಲಾಗಿದ್ದು, ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಅದರಂತೆ, ಹೆದ್ದಾರಿಗಳಲ್ಲಿ ಸಾಗುವ ಪ್ರತಿಯೊಂದು ವಾಹನ, ತಾನು ಚಲಿಸಿದ  ದೂರಕ್ಕಷ್ಟೇ ಶುಲ್ಕ ಕಟ್ಟುವ ಅನುಕೂಲ ಕಲ್ಪಿಸಲಾಗುತ್ತದೆ. ಇದು, ವಾಹನ ಸವಾರರಿಗೆ ಅನಗತ್ಯವಾಗಿ ತಮ್ಮ ಬಳಕೆಗೂ ಮೀರಿ ಹೆಚ್ಚು ಟೋಲ್‌ ಕಟ್ಟುವಂಥಹ ಹೊರೆಯನ್ನು ತಪ್ಪಿಸುತ್ತದೆಸ ಎಂದು ಮಲಿಕ್ ಹೇಳಿದರು.
ಅಂತೆಯೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಗುವ ವಾಹನವು ಚಲಿಸಿದ ದೂರ ಹಾಗೂ ಅದಕ್ಕೆ ಅನುಗುಣವಾದ ಶುಲ್ಕವನ್ನು ನಿಗದಿಗೊಳಿಸಲೆಂದೇ 'ಡಿಸ್ಟೆನ್ಸ್‌ ಬೇಸ್ಡ್ ಎಲೆಕ್ಟ್ರಾನಿಕ್‌ ಟೋಲಿಂಗ್‌' ಎಂಬ ವಿನೂತನ ತಂತ್ರಜ್ಞಾನವನ್ನು  ಅಳವಡಿಸಲಾಗುವುದು. ಈಗಾಗಲೇ, ಈ ತಂತ್ರಜ್ಞಾನ ಅಮೆರಿಕ, ಆಸ್ಟ್ರೇಲಿಯಾದಂಥಹ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿವೆ. ಈ ನೂತನ ವ್ಯವಸ್ಥೆ ಮೂಲಕ ವಾಹನ ಸವಾರರಿಗೆ ಶುಲ್ಕದ ಹೊರೆ ಖಂಡಿತವಾಗಿಯೂ ಇಳಿಕೆಯಾಗುತ್ತದೆ  ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT