ದೇಶ

ಪಾಕಿಸ್ತಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಗೆ ಅಮೆರಿಕ ಕೆಂಗಣ್ಣು

Srinivas Rao BV
ವಾಷಿಂಗ್ ಟನ್: ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕೆಂಬ ಕೂಗು ಕೇಳಿಬಂದಿದ್ದ ಬೆನ್ನಲ್ಲೇ, ಈಗ ಪಾಕಿಸ್ತಾನಕ್ಕೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. 
ಪಾಕಿಸ್ತಾನದಲ್ಲಿನ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯಾಗುತ್ತಿರುವುದು ಅಮೆರಿಕ ಕೆಂಗಣ್ಣಿಗೆ ಗುರಿಯಾಗಿದ್ದು, ಪಾಕಿಸ್ತಾನವನ್ನು ನಿರ್ದಿಷ್ಟ ಕಳವಳಕಾರಿ ರಾಷ್ಟ್ರ (country of particular concern)ಗಳ ಪಟ್ಟಿಗೆ ಸೇರಿಸಬೇಕೆಂದು 6 ಪ್ರಭಾವಿ ಸೆನೆಟರ್ ಗಳು ಅಮೆರಿಕ ಸಚಿವ ರೆಕ್ಸ್ ಟಿಲರ್ಸನ್ ಗೆ ಮನವಿ ಮಾಡಿದ್ದಾರೆ. 
ಪಾಕಿಸ್ತಾನದಲ್ಲಿರುವ ತಾರತಮ್ಯ ಕಾನೂನುಗಳು ವೈಯಕ್ತಿಕ ಧಾರ್ಮಿಕ ನಂಬಿಕೆ ಕಾರಣದಿಂದಾಗಿ ಕ್ರಮ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣ ಮಾಡುತ್ತಿವೆ ಎಂದು ಅಮೆರಿಕ ಸೆನೆಟರ್ ಗಳು ಆರೋಪಿಸಿದ್ದಾರೆ. ಅಮೆರಿಕಾದ ವಿದೇಶಾಂಗ ಇಲಾಖೆ ನ.13 ರೊಳಗಾಗಿ ಕಂಟ್ರಿ ಆಫ್ ಪರ್ಟಿಕುಲರ್ ಕನ್ಸರ್ನ್(ಸಿಪಿಸಿ) ಪಟ್ಟಿಯನ್ನು ಕಾಂಗ್ರೆಸ್ ಗೆ ನೋಟಿಫೈ ಮಾಡಬೇಕಿದ್ದು, ಪಾಕಿಸ್ತಾನವನ್ನೂ ಈ ಪಟ್ಟಿಗೆ ಸೇರಿಸಬೇಕೆಂದು ಸೆನೆಟರ್ ಗಳಾದ ಬಾಬ್ ಮೆನೆಂಡೆಜ್, ಮಾರ್ಕೊ ರೂಬಿಯೊ, ಕ್ರಿಸ್ ಕೂನ್ಸ್, ಟಾಡ್ ಯಂಗ್, ಜೆಫ್ ಮರ್ಕ್ಲೆ ಮತ್ತು ಜೇಮ್ಸ್ ಲಂಕಾರ್ಡ್ ರೆಕ್ಸ್ ಟಿಲರ್ಸನ್ ಗೆ ಪತ್ರ ಬರೆದಿದ್ದಾರೆ.
SCROLL FOR NEXT