ದೇಶ

ಭಾರತ ಮೊದಲು ಹಿಂದೂಗಳಿಗೆ ಸೇರಿದ್ದು; ಮುಸ್ಲಿಮರಿಗೆ 50ಕ್ಕೂ ಹೆಚ್ಚು ದೇಶಗಳಿವೆ: ಶಿವಸೇನೆ

Shilpa D
ಮುಂಬಯಿ: ಕೇಂದ್ರದಲ್ಲಿ ಹಿಂದುತ್ವಪರ ಸರ್ಕಾರವಿದ್ದರೂ, ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆ, ಘರ್ ವಾಪ್ಸಿ ಮತ್ತು ಕಾಶ್ಮೀರ ಪಂಡಿತರ ಸಮಸ್ಯೆಗಳು ಇನ್ನೂ ಬಗೆಹರಿಯದಿರುವುದಕ್ಕೆ ಶಿವಸೇನೆ ವಿಷಾಧ ವ್ಯಕ್ತ ಪಡಿಸಿದೆ.
ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಈ ಬಗ್ಗೆ ಬರೆದಿರುವ ಶಿವಸೇನೆ, ಇತ್ತೀಚೆಗೆ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ನೀಡಿದ ಹೇಳಿಕೆಗೆ  ಪ್ರತಿಕ್ರಿಯಿಸಿದ್ದು, ಹಿಂದೂಸ್ತಾನ ಹಿಂದೂಗಳ ರಾಷ್ಟ್ರವಾಗಿದ್ದು, ಇದರ ಅರ್ಥ ಭಾರತ ಬೇರೆಯವರಿಗೆ ಸೇರಿದ್ದಲ್ಲ ಎಂಬ ಅರ್ಥವಲ್ಲ ಎಂದು ಹೇಳಲಾಗಿತ್ತು.
ಮೊದಲು ಭಾರತ ಹಿಂದೂಗಳಿಗೆ ಸೇರಿದ್ದು, ಮತ್ತು ನಂತರ, ಬೇರೆಯವರಿಗೆ ಸ್ಥಾನ, ಏಕೆಂದರೆ ಮುಸ್ಲಿಮರಿಗೆ  50 ದೇಶಗಳಿವೆ ಹಿಂದೂಗಳಿಗಾಗಿ ಇರುವುದು ಭಾರತ ಮಾತ್ರ ಎಂದು ಸಾಮ್ನಾದಲ್ಲಿ ತಿಳಿಸಲಾಗಿದೆ.
ಕ್ರಿಶ್ಚಿಯನ್ನರಿಗಾಗಿ ಅಮೆರಿಕಾ, ಯುರೋಪ್, ಬುದ್ದರಿಗಾಗಿ ಶ್ರೀಲಂಕಾ ಮಯನ್ಮಾರ್ ದೇಶಗಳಿವೆ, ಆದರೆ ಹಿಂದೂಗಳಿಗಾಗಿ ಭಾರತ ಬಿಟ್ಟರೆ ಯಾವುದೇ ರಾಷ್ಟ್ರವಿಲ್ಲ ಎಂದು ಹೇಳಿದೆ. 
SCROLL FOR NEXT