ನವದೆಹಲಿ: ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್(ಎನ್ಎಸ್ ಸಿ) ಹಾಗೂ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ನಂತಹ ಪೋಸ್ಟ್ ಆಫೀಸ್ ಸೇವಿಂಗ್ಸ್ ಯೋಜನೆಯ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಖಾತೆದಾರರು ವೈಯಕ್ತಿಕ ಸ್ಟೇಟಸ್ ನ್ನು ಎನ್ಆರ್ ಐ ಗೆ ಬದಲಸಿಕೊಂಡರೆ ಅಂತಹ ಖಾತೆಗಳು ಮೆಚ್ಯುರಿಟಿಗೂ ಮುನ್ನವೇ ಖಾತೆ ರದ್ದುಗೊಳ್ಳಲಿದೆ.
ಈ ತಿಂಗಳ ಪ್ರಾರಂಭದಲ್ಲಿ ತಿದ್ದುಪಡಿ ತರಲಾಗಿದ್ದು, ಗೆಝೆಟ್ ನೋಟಿಫಿಕೇಷನ್ ನ್ನೂ ಕಳಿಸಲಾಗಿದೆ. ಪಿಪಿಎಫ್ ಖಾತೆಯನ್ನು ಹೊಂದಿರುವ ವ್ಯಕ್ತಿ ಅನಿವಾಸಿ ಭಾರತೀಯ (ಎನ್ಆರ್ ಐ) ಆದ ದಿನದಿಂದ ಖಾತೆ ರದ್ದುಗೊಳ್ಳಲಿದೆ ಎಂದು ತಿದ್ದುಪಡಿ ನಿಯಮದಲ್ಲಿ ತಿಳಿಸಲಾಗಿದೆ.
ಖಾತೆ ಚಾಲ್ತಿಯಲ್ಲಿರುವವರೆಗಷ್ಟೇ ಬಡ್ಡಿಯ ಮೊತ್ತವನ್ನೂ ಪಾವತಿ ಮಾಡಬಹುದಾಗಿದೆ ಎಂದು ತಿದ್ದುಪಡಿ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.