ದೇಶ

ಯುಪಿಎಸ್'ಸಿ ಪರೀಕ್ಷೆ ವೇಳೆ ಬ್ಲೂಟೂತ್ ಇಟ್ಟುಕೊಂಡು ಸಿಕ್ಕಿಬಿದ್ದ ಐಪಿಎಸ್ ಅಧಿಕಾರಿ

Manjula VN

ಚೆನ್ನೈ: ಐಎಎಸ್ ಅಧಿಕಾರಿಯಾಗುವ ಆಸೆ ಹೊತ್ತಿದ್ದ ಐಪಿಎಸ್ ಅಧಿಕಾರಿಯೊಬ್ಬ, ಯುಪಿಎಸ್'ಸಿ ಪರೀಕ್ಷೆ ವೇಳೆ ಹೈಟೆಕ್ ಕಾಪಿ ಮಾಡಲು ಹೋಗಿ ಸಿಕ್ಕಿಬಿದ್ದ ಘಟನೆ ತಮಿಳುನಾಡಿನಲ್ಲಿ ಸೋಮವಾರ ನಡೆದಿದೆ. 

ಹಾಲಿ ತರಬೇತಿಯಲ್ಲಿರುವ ಐಪಿಎಸ್ ಅಧಿಕಾರಿ ಸಫೀರ್ ಖಾನ್ ಸೋಮವಾರ ನಡೆದ ಯುಪಿಎಸ್'ಸಿ ಪರೀಕ್ಷೆಗೆ ಹಾಜರಾಗಿದ್ದ. ಈ ವೇಳೆ ಆತ ಕಿವಿಯಲ್ಲಿ ಬ್ಲೂಟೂತ್ ಉಪಕರಣ ಇಟ್ಟುಕೊಂಡು ಹೈದ್ರಾಬಾದ್'ನಲ್ಲಿದ್ದ ತನ್ನ ಪತ್ನಿಯ ಮೂಲಕ ಉತ್ತರ ಪಡೆದುಕೊಳ್ಳುತ್ತಿದ್ದ. ಆದರೆ, ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. 

ಸರೀಫ್ ಕರೀಂ ಯುಪಿಎಸ್ ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ. ತಿರುನಲ್ವೇಲಿ ಜಿಲ್ಲೆಯ ನಂಗುನೇರಿಯಲ್ಲಿ ಸಹಾಯಕ ಎಸ್'ಪಿ ಆಗಿ ನಿಯೋಜಿತನಾಗಿದ್ದ ಇವರು, ಪ್ರೆಸಿಡೆನ್ಸಿ ಗರ್ಲ್ಸ್ ಉನ್ನತ ಮಾಧ್ಮಯಿಕ ಶಾಲೆಯಲ್ಲಿ ನಡೆದ ಪರೀಕ್ಷೆಗೆ ಹಾಜರಾಗುವ ವೇಳೆ ಕೊಠಡಿಗೆ ಮೊಬೈಲ್ ಫೋನ್ ಹಾಗೂ ಬ್ಲೂಟೂತ್ ಇರುವ ಸೂಕ್ಷ್ಮ ಕ್ಯಾಮೆರಾ ಮತ್ತು ವೈರ್'ವೆಲ್ ಶ್ರವಣ ಸಾಧನವನ್ನು ಕೊಂಡೊಯ್ದಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಕರೀಂ ಅವರು ಶನಿವಾರ ಪರೀಕ್ಷೆ ಬರೆದಿದ್ದರು. ಈ ವೇಳೆ ಅಧಿಕಾರಿಗಳಿಗೆ ಕರೀಂ ಮೇಲೆ ಅನುಮಾನಗಳು ಬಂದಿದ್ದವು. ಇದರಂತೆ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು. ಅಧಿಕಾರಿಗಳು ಅನುಮಾನ ಪಡುತ್ತಿದ್ದಾರೆಂಬುದನ್ನು ತಿಳಿದಿದ್ದ ಕರೀಂ ಬಳಿಕ ತನ್ನ ಬಳಿಯಿದ್ದ ಮೊಬೈಲ್ ಫೋನ್'ವಶಕ್ಕೆ ನೀಡಿದ್ದರು. ಆದರೆ, ಮತ್ತೊಂದು ಮೊಬೈಲ್ ಫೋನ್ ಅವರ ಬಳಿಯಿತ್ತು ಎಂದು ಅಧಿಕಾರಿಗಳು ತಿಳಿದ್ದಾರೆ. 

ಕೇರಳದ ಅಲುವಾ ಜಿಲ್ಲೆಯವನಾದ ಕರೀಂ ಎರಡನೇ ಪ್ರಯತ್ನದಲ್ಲಿ 112ನೇ ರ್ಯಾಂಕ್ ಗಳಿಸಿದ್ದ . ಈತ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪದವೀಧರನಾಗಿದ್ದು, ಕರೀಂ ಐಎಎಸ್ ನ ಮಾಲೀಕನಾಗಿದ್ದ. ಈ ಸಂಸ್ಥೆ ಕೊಚ್ಚಿ ಮತ್ತು ತಿರುವನಂತಪುರಂಗಳಲ್ಲಿ ಶಾಖೆಗಳನ್ನು ಹೊಂದಿದೆ. 

ಸಫೀರ್ ಅವರನ್ನು ಇದೀಗ ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು, ಅವರ ವಿರುದ್ದ ಐಪಿಸಿ ಸೆಕ್ಷನ್ 420, 120ಬಿ, 34 ಮತ್ತು 66ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಸ್ತುತ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 
SCROLL FOR NEXT