ಸಾಂದರ್ಭಿಕ ಚಿತ್ರ 
ದೇಶ

ಉತ್ತರಪ್ರದೇಶ ಮದರಸಾಗಳಲ್ಲಿ ಎನ್'ಸಿಇಆರ್'ಟಿ ಪಠ್ಯಕ್ರಮಕ್ಕೆ ನಿರ್ಧಾರ

ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ನೆರವಾಗುವಂತೆ ಉತ್ತರಪ್ರದೇಶ ರಾಜ್ಯದ ಎಲ್ಲಾ ಇಸ್ಲಾಮಿಕ್ ಶಾಲೆಗಳಲ್ಲಿ ಎನ್'ಸಿಇಆರ್'ಟಿ ಸಿದ್ದಪಡಿಸುವ ಪುಸ್ತಕ ಪರಿಚಯಿಸಲು ನಿರ್ಧಾರ ಕೈಗೊಳ್ಳಲಾಗಿದೆ...

ಲಖನೌ: ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ನೆರವಾಗುವಂತೆ ಉತ್ತರಪ್ರದೇಶ ರಾಜ್ಯದ ಎಲ್ಲಾ ಇಸ್ಲಾಮಿಕ್ ಶಾಲೆಗಳಲ್ಲಿ ಎನ್'ಸಿಇಆರ್'ಟಿ ಸಿದ್ದಪಡಿಸುವ ಪುಸ್ತಕ ಪರಿಚಯಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. 
ಉತ್ತರಪ್ರದೇಶದ ರಾಜ್ಯದ ಎಲ್ಲಾ ಮದರಸಾಗಳಲ್ಲಿ ಗಣಿತ ಹಾಗೂ ವಿಜ್ಞಾನ ಕಡ್ಡಾಯಗೊಳಿಸುವುದರೊಂದಿಗೆ ಎನ್'ಸಿಇಆರ್'ಟಿ ಪಠ್ಯಪುಸ್ತಕಗಳನ್ನು ಅಳವಡಿಸಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರ ಕೈಗೊಂಡಿದೆ. 
ಈ ಕುರಿತಂತೆ ಮಾಹಿತಿ ನೀಡಿರುವ ಉತ್ತರಪ್ರದೇಶ ಮದರಸಾ ಶಿಕ್ಷಾ ಪರಿಷತ್ ರಿಜಿಸ್ಟ್ರಾರ್ ರಾಹುಲ್ ಗುಪ್ತ ಅವರು, ಮುಖ್ಯವಾಗಿ ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ಶಿಕ್ಷಣವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಮದರಸಾಗಳಲ್ಲಿ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳು ಮೌಲ್ವಿ ಹುದ್ದೆಗೆ ಸೀಮಿತರಾಗುತ್ತಾರೆ. ಹಾಗಾಗಿ ಎಲ್ಲಾ ಮದರಸಾಗಳಲ್ಲಿ ಆಧುನಿಕ ಶಿಕ್ಷಣ ಪದ್ಧತಿ ಜಾರಿಗೆ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. 
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಹಾಗೂ ತರಬೇತಿ ಮಂಡಳಿ (ಎನ್'ಸಿಆರ್'ಟಿ) ಶಾಲಾ ಶಿಕ್ಷಣದ ಸರ್ವೋಚ್ಛ ಸಂಸ್ಥೆಯಾಗಿದ್ದು, ಜನವರಿಯಲ್ಲಿ 2018-19ರ ಸಾಲಿಗೆ ಎನ್'ಸಿಇಆರ್'ಟಿ ಪುಸ್ತಕಗಳನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿಂದಿನಂತೆಯೇ ಧಾರ್ಮಿಕ ಶಿಕ್ಷಣ ಮುಂದುವರೆಯಲಿದೆ. ಆದರೆ, ಇತರೆ ಕಲಿಕೆಗೆ ಸಂಬಂಧಿಸಿದಂತೆ ಬದಲಾವಣೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ. 
ಪಠ್ಯಕ್ರಮ ಪರಿಷ್ಕರಣೆ ಕುರಿತಂತೆ ಉತ್ತರಪ್ರದೇಶ ಸರ್ಕಾರ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ, ಲಖನೌ ವಿಶ್ವವಿದ್ಯಾಲಯ, ಉರ್ದು ಅರೇಬಿ ಫರ್ಸಿ ವಿವಿ, ಲಖನೌ ಮೂಲದ ಇಂಟಿಗ್ರಲ್ ವಿವಿ, ನಡ್ವಾತುಲ್ ಉಲಾಮಾ ಮತ್ತು ಇತರೆ ಪ್ರಮುಖ ಸೆಮಿರಿನರಿಗಳಿಂದ ಸಲಹೆಗಳನ್ನು ಪಡೆದುಕೊಂಡು ನಿರ್ಧಾರ ಕೈಗೊಂಡಿದೆ. 
ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ದಿನೇಶ್ ಶರ್ಮಾ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ರಾಜ್ಯ ಸರ್ಕಾರದ ಒಪ್ಪಿಗೆ ಬಳಿಕ ಉತ್ತರಪ್ರದೇಶ ಮದರಸಾ ಮಂಡಳಿಗಳು ಎನ್'ಸಿಆರ್'ಟಿ ಪುಸ್ತಕಗಳ ಕುರಿತು ಸಿದ್ಧತೆಗಳನ್ನು ನಡೆಸುತ್ತಿವೆ ಎಂದು ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಉತ್ತರಪ್ರದೇಶ ರಾಜ್ಯ ಎಲ್ಲಾ ಇಸ್ಲಾಮಿಕ್ ಸಂಸ್ಥೆಗಳಿಗೆ ತಮ್ಮ ಶಾಲಾ ವಿವರಗಳನ್ನು ಉತ್ತಪ್ರದೇಶ ಮದರಸಾ ಬೋರ್ಡ್ ನಲ್ಲಿ ಆನ್'ಲೈನ್ ನಲ್ಲಿ ದಾಖಲಿಸಲು ಸೂಚಿಸಲಾಗಿತ್ತು. ಬಳಿಕ ಎಲ್ಲಾ ಮದರಾಸಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಡ್ಡಾಯಗೊಳಿಸಿತ್ತು. 
ಸೆ.17ರ ಹೊತ್ತಿಗೆ ಸುಮಾರು 2500 ಮದರಸಾಗಳು ತಮ್ಮ ವಿವರಗಳನ್ನು ಹಾಗೂ ಮಾಹಿತಿಗಳನ್ನು ದಾಖಲಿಸಿದ್ದಾಗಿ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಲಕ್ಷ್ಮೀ ನಾರಾಯಣ್ ಚೌಧರಿಯವರು ತಿಳಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT