ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಯಿಸಿದ್ದಾರೆ. "ಯುಪಿಎ ಮತ್ತು ಎನ್ ಡಿಎ ಸರ್ಕಾರಗಳ ನಡುವಿನ ವ್ಯತ್ಯಾಸ - ಆಗ ಭ್ರಷ್ಠಾಚಾರ ಮಾಡು೮ವುದು ಸುಲಭವಾಗಿತ್ತು. ಈಗ ಭ್ರಷ್ಠಾಚಾರದ ಬದಲು ಉದ್ಯಮ ನಡೆಸುವುದು ಸುಲಭವಾಗಿದೆ"
ಜಿಎಸ್ ಟಿ ಮತ್ತು ನೋಟು ನಿಷೇಧದ ಕಾರಣ ಭಾರತದಲ್ಲಿ ಉದ್ಯಮ ನಡೆಸುವುದು ಕಠಿಣವಾಗುತ್ತಿದೆ ಎಂಬ ರಾಹುಲ್ ಟ್ವೀಟ್ ಗೆ ಪ್ರತಿಕ್ರಯಿಸಿದ ಜೇಟ್ಲಿ "ಯುಪಿಎ ಮತ್ತು ಎನ್‌ಡಿ ಎ ನಡುವಿನ ವ್ಯತ್ಯಾಸ ಗಮನಿಸಿ- ಭ್ರಷ್ಟಾಚಾರ ನಡೆಸುವುದು ಸುಲಭ ವಾಗಿದ್ದ ಪರಿಸ್ಥಿತಿ ಬದಲಾಗಿ ಉದ್ಯಮ ನಡೆಸುವುದು ಸುಲಭ ಎನ್ನುವ ಪರಿಸ್ಥಿತಿ ಬಂದಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಹಣಕಾಸು ಸಚಿವ ಅರುಣ್ ಜೇಟ್ಲಿ, ರಾಹುಲ್ ಗಾಂಧಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆದಾರರನ್ನು ಭೇಟಿಯಾಗಬೇಕು ಅವರು ವ್ಯವಹಾರ ನಡೆಸುವುದು ಎಷ್ಟು ಸುಲಭವಾಗಿದೆ ಎನ್ನುವುದನ್ನು ಅರಿಯಬೇಕು ಎಂದಿದ್ದಾರೆ.
ವಿಶ್ವ ಬ್ಯಾಂಕಿನ ವರದಿ ಪ್ರಕಾರ, ದೇಶವು ಪ್ರಸಕ್ತ ಈ ವರ್ಷ ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಗೆ 130 ರಿಂದ 100ನೇ ಸ್ಥಾನಕ್ಕೆ ಭಡ್ತಿ ಪಡೆದಿದೆ.