ದೇಶ

ಅಂತಿಮ ತೀರ್ಪಿಗಾಗಿ ಒಂದು ದಿನಾಂಕ ನಿಗದಿ ಮಾಡಿ: ಕೋರ್ಟ್ ಗಳಿಗೆ ಕಾನೂನು ಸಚಿವಾಲಯ

Lingaraj Badiger
ನವದೆಹಲಿ: ಡಿಸೆಂಬರ್ 2018ರ ವೇಳೆಗೆ ನ್ಯಾಯಾಂಗದಲ್ಲಿ ಗಮನಾರ್ಹ ಬದಲಾವಣೆಯಾಗುವ ಸಾಧ್ಯತೆ ಇದ್ದು, ಮುಂದಿನ ಒಂದು ವರ್ಷದ ಅವಧಿಯಲ್ಲಿ ಬಾಕಿ ಇರುವ 3.2ಕೋಟಿ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಲು ಭಾರತೀಯ ನ್ಯಾಯಾಂಗ ನಿರ್ಧರಿಸಿದೆ.
ಪ್ರತಿ ಪ್ರಕರಣದ ಅಂತಿಮ ತೀರ್ಪಿಗೆ ಒಂದು ದಿನಾಂಕ ನಿಗದಿಪಡಿಸುವಂತೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ದೇಶದ ಎಲ್ಲಾ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ. ವಿಶೇಷವಾಗಿ ಕಳೆದ 5ರಿಂದ 10 ವರ್ಷಗಳಿಂದ ಬಾಕಿ ಇರುವ ಪ್ರಕರಣಗಳಿಗೆ ಡಿಸೆಂಬರ್ 2018ರೊಳಗೆ ಅಂತಿಮ ತೀರ್ಪಿನ ದಿನಾಂಕ ನಿಗದಪಡಿಸುವಂತೆ ಸೂಚಿಸಿದೆ.
ದೇಶಾದ್ಯಂತ ವಿಚಾರಣಾ ನ್ಯಾಯಾಲಯಗಳಲ್ಲಿ ಸುಮಾರು 2.54 ಕೋಟಿ ಪ್ರಕರಣಗಳು ಬಾಕಿ ಇವೆ. ಪ್ರಕರಣ ದಾಖಲಾದ ತಕ್ಷಣವೇ ಅಂತಿಮ ತೀರ್ಪಿನ ದಿನಾಂಕ ನೀಡುವ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆಯೂ ಸಚಿವಾಲಯ ಗಂಭೀರ ಚಿಂತನೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ನಡೆದ ಕಾನೂನು ಮತ್ತು ನೀತಿ ಆಯೋಗದ ಸಭೆಯಲ್ಲೂ ವಿಷೇಷವಾಗಿ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳ ವಿಚಾರಣೆಗೆ ಒಂದು ಸಮಯ ನಿಗದಿ ಮಾಡಬೇಕು ಎಂಬುದುರ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ. ಹೀಗಾಗಿ ವಿಚಾರಣಾ ಕೋರ್ಟ್ ಒಂದು ಸುತ್ತಿನ ದಾವೆಗಳನ್ನು ಎರಡರಿಂದ ಮೂರು ವರ್ಷಗಳಲ್ಲಿ ಇತ್ಯರ್ಥಪಡಿಸೇಬಕು ಮತ್ತು ಸಿವಿಲ್ ಪ್ರಕರಣಗಳನ್ನು ಎಳರಿಂದ ಎಂಟು ವರ್ಷಗಳಲ್ಲಿ ಪೂರ್ಣಗೊಳಿಸಬೇಕು ಎಂದು ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ.
SCROLL FOR NEXT