ಲೆ.ಜನರಲ್ ಝಾ ಐಎಂಎ ನ ನೂತನ ಕಮಾಂಡೆಂಟ್
ಲೆಫ್ಟಿನೆಂಟ್ ಜನರಲ್ ಸಂಜಯ್ ಕುಮಾರ್ ಝಾ ಇಂದು ಪ್ರತಿಷ್ಠಿತ ಇಂಡಿಯನ್ ಮಿಲಿಟರಿ ಅಕಾಡಮಿಯ (ಐಎಂಎ) 48 ನೇ ಕಮಾಂಡೆಂಟ್ ಆಗಿ ನೇಮಕಗೊಂಡಿದ್ದಾರೆ.
ಡೆಹರಾಡೂನ್: ಲೆಫ್ಟಿನೆಂಟ್ ಜನರಲ್ ಸಂಜಯ್ ಕುಮಾರ್ ಝಾ ಇಂದು ಪ್ರತಿಷ್ಠಿತ ಇಂಡಿಯನ್ ಮಿಲಿಟರಿ ಅಕಾಡಮಿಯ (ಐಎಂಎ) 48 ನೇ ಕಮಾಂಡೆಂಟ್ ಆಗಿ ನೇಮಕಗೊಂಡಿದ್ದಾರೆ.
ಲೆಫ್ಟಿನೆಂಟ್ ಜನರಲ್ ಝಾ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಐಎಂಎಯ ಓರ್ವ ಹಳೆಯ ವಿದ್ಯಾರ್ಥಿಯಾಗಿದ್ದು, ಡಿಸೆಂಬರ್ 13, 1980 ರಂದು ಸಿಖ್ ರೆಜಿಮೆಂಟ್ 17 ನೇ ಬೆಟಾಲಿಯನ್ನಲ್ಲಿ ನೇಮಕವಾಗಿದ್ದರು.
36 ವರ್ಷಗಳಿಗಿಂತಲೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ, ಹಲವಾರುಮಹತ್ವದ ಅಧಿಕಾರ ಸ್ಥಾನಗಳನ್ನು ಹೊಂದಿದ್ದ ಝಾ ಅವರು ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್, ಅಸ್ಸಾಂ ರೈಫಲ್ಸ್ ಸೆಕ್ಟರ್ ಮತ್ತು ಈಶಾನ್ಯದ ಪರ್ವತ ವಿಭಾಗಗಳನ್ನು ನಿರ್ವಹಿಸಲಿದ್ದಾರೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.