ನಾದಿರ್ ಷಾ 
ದೇಶ

ಮಲಯಾಳಂ ನಟಿ ಅಪಹರಣ ಪ್ರಕರಣ: ಕೇರಳ ಪೋಲೀಸರಿಂದ ನಾದಿರ್ ಷಾ ಗೆ ಸಮನ್ಸ್

ಮಲಯಾಲಂ ನಟಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ, ನಿರ್ದೇಶಕ ನಾದಿರ್ ಷಾ ಅವರನ್ನು ಪುನಃ ವಿಚಾರಣೆಗೆ ಹಾಜರಾಗುವಂತೆ ಕೇರಳ ಪೋಲಿಸರು ಸಮನ್ಸ್ ಜಾರಿ ಮಾಡಿದ್ದಾರೆ.

ಕೊಚ್ಚಿ: ಮಲಯಾಲಂ ನಟಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ, ನಿರ್ದೇಶಕ ನಾದಿರ್ ಷಾ ಅವರನ್ನು ಪುನಃ ವಿಚಾರಣೆಗೆ ಹಾಜರಾಗುವಂತೆ ಕೇರಳ ಪೋಲಿಸರು ಸಮನ್ಸ್ ಜಾರಿ ಮಾಡಿದ್ದಾರೆ.  ಈ ಹಿಂದೆ ಜೂನ್ ತಿಂಗಳಲ್ಲಿ ನಾದಿರ್ ಷಾ ಅವರನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿ 13 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.
ಷಾ ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿದ್ದು ಒಮ್ಮೆ ಬಿಡುಗಡೆಯಾದ ಬಳಿಕ, ಪೋಲೀಸರ ಮುಂದೆ ಹಾಜರಾಗಬೇಕಾಗಿದೆ.  ಈ ನಡುವೆ ಷಾ ಅವರು ನಿರೀಕ್ಷಿತ ಜಾಮೀನು ಕೋರಿ ಕೇರಳ ಹೈ ಕೋರ್ಟ್ ಮೊರೆ ಹೋಗಿದ್ದಾರೆ. ಈ ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ ನಡೆಯಲಿದೆ.
ನಟಿಯು ಕಳೆದ ಫೆಬ್ರವರಿಯಲ್ಲಿ ತ್ರಿಶೂರ್ ನಿಂದ ಕೊಚ್ಚಿ ಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಅಪಹರಣವು ನಡೆದಿತ್ತು.
ನಟ, ನಿರ್ದೇಶಕ ಲಾಲ್ ಅವರ ನಿವಾಸದ ಬಳಿ ನಟಿಯನ್ನು ಬಿಟ್ಟು ಹೋಗುವ ಮುನ್ನ ಅವಳನ್ನು ಬಲವಂತವಾಗಿ ವಾಹನದಲ್ಲಿ ಕರೆದೊಯ್ದು ಸುಮಾರು ಎರಡು ಗಂಟೆಗಳ ಕಾಲ ಸುತ್ತಾಟ ನಡೆಸಿದ್ದರು ಎನ್ನಲಾಗಿದೆ.
ಮುಖ್ಯ ಆರೋಪಿಗಳಾದ ಪಲ್ಸರ್ ಸುನಿ ಮತ್ತು ಅವರ ಸಹಚರರು ನೈಜ ಅಪಹರಣದಲ್ಲಿ ಭಾಗವಹಿಸಿದ್ದು ಅವರನ್ನು ಒಂದು ವಾರದ ನಂತರ ಬಂಧಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!