ಸಂಗ್ರಹ ಚಿತ್ರ 
ದೇಶ

ಗುರ್ಮಿತ್ ರಾಮ್ ರಹೀಂ 'ಲೈಂಗಿಕ ವ್ಯಸನಿ': ರೋಹ್ಟಕ್ ಜೈಲು ವೈದ್ಯಾಧಿಕಾರಿಗಳ ಹೇಳಿಕೆ!

ಮಹತ್ವದ ಬೆಳವಣಿಗೆಯಲ್ಲಿ ಅತ್ಯಾಚಾರಿ ಬಾಬಾ ರಾಮ್ ರಹೀಂ ನನ್ನು ಪರೀಕ್ಷಿಸಿದ ರೋಹ್ಟಕ್ ಜೈಲ ವೈದ್ಯಾಧಿಕಾರಿಗಳು, ಬಾಬಾ ರಾಮ್ ರಹೀಂ ಲೈಂಗಿಕ ವ್ಯಸನಿಯಾಗಿದ್ದಾನೆ ಎಂದು ಹೇಳಿದ್ದಾರೆ.

ರೋಹ್ಟಕ್: ಮಹತ್ವದ ಬೆಳವಣಿಗೆಯಲ್ಲಿ ಅತ್ಯಾಚಾರಿ ಬಾಬಾ ರಾಮ್ ರಹೀಂ ನನ್ನು ಪರೀಕ್ಷಿಸಿದ ರೋಹ್ಟಕ್ ಜೈಲ ವೈದ್ಯಾಧಿಕಾರಿಗಳು, ಬಾಬಾ ರಾಮ್ ರಹೀಂ ಲೈಂಗಿಕ ವ್ಯಸನಿಯಾಗಿದ್ದಾನೆ ಎಂದು ಹೇಳಿದ್ದಾರೆ.

ಅತ್ಯಾಚಾರ ಪ್ರಕರಣ ಸಂಬಂಧ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪಿನ ಬಳಿಕ ಜೈಲುಪಾಲಾಗಿರುವ ಬಾಬಾ ರಾಮ್ ರಹೀಂ ಜೈಲಿನಲ್ಲಿ ಅನಾರೋಗ್ಯಕ್ಕೀಡಾಗಿದ್ದ, ಈ ವೇಳೆ ಜೈಲು ಅಧಿಕಾರಿಗಳು ಜೈಲಿನ ವೈದ್ಯರನ್ನು ಕರೆಯಿಸಿ  ಪರೀಕ್ಷೆ ನಡೆಸಿದ್ದು, ಈ ವೇಳೆ ರಾಮ್ ರಹೀಂ ಲೈಂಗಿಕ ವ್ಯಸನಿ ಎಂಬ ವಿಚಾರವನ್ನು ವೈದ್ಯರು ಬಹಿರಂಗ ಪಡಿಸಿದ್ದಾರೆ. ಇದಲ್ಲದೆ ಬಾಬಾ ರಾಮ್ ರಹೀಂಗೆ ಸಕ್ಕರೆ ಖಾಯಿಲೆ ಇದ್ದು, ಬಿಪಿ ಕೂಡ ಇದೆ ಎಂದು ಹೇಳಿದ್ದಾರೆ.

ಇನ್ನು ರಾಮ್ ರಹೀಂ ಅನಾರೋಗ್ಯಕ್ಕೆ ವೈದ್ಯರು ಹೇಳಿರುವ ಕಾರಣಗಳು ಬೆಚ್ಚಿ ಬೀಳಿಸುವಂತಿದ್ದು. ಡೇರಾ ಸಚ್ಚಾ ಸೌಧ ಆಶ್ರಮದಲ್ಲಿದ್ದಾಗ ನಿತ್ಯ ರಾಮ್ ರಹೀಂ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ. ಆದರೆ ಜೈಲಿಗೆ ಬಂದ ಬಳಿಕ  ಆತನ ದೈಹಿಕ ಒತ್ತಡಗಳ ನಿವಾರಣೆಯಾಗುತ್ತಿಲ್ಲ. ಹೀಗಾಗಿ ಆತ ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾನೆ ಮತ್ತು ಬಳಲಿದಂತೆ ಕಾಣುತ್ತಿದ್ದಾನೆ. ಇದನ್ನು ಹೊರತು ಪಡಿಸಿ ಆತನಿಗೆ ಇನ್ನಾವುದೇ ಆನಾರೋಗ್ಯ. ತೊಂದರೆ ಇಲ್ಲ. ಸಕ್ಕರೆ  ಮತ್ತು ಬಿಪಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.

ಜೈಲಿನಲ್ಲಿ ಆತ ತನ್ನ ದೈಹಿಕ ಕಾಮನೆಗಳನ್ನು ತೀರಿಸಿಕೊಳ್ಳು ಸಾಧ್ಯವಾಗದೇ ಇರುವುದರಿಂದ ಆತ ತೀವ್ರ ಒತ್ತಡಕ್ಕೆ ಒಳಗಾಗಿದ್ದಾನೆ. ಪ್ರಸ್ತುತ ಆತನಿಗೆ ಕೆಲ ಔಷಧಿಗಳನ್ನು ನೀಡಲಾಗಿದ್ದು, ಶೀಘ್ರ ಗುಣಮುಖನಾಗುವ ವಿಶ್ವಾಸವನ್ನು  ವೈದ್ಯರು ವ್ಯಕ್ತಪಡಿಸಿದ್ದಾರೆ. ಆದರೆ ರಾಮ್ ರಹೀಂ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದನೆ ಎಂಬುದನ್ನು ಖಚಿತವಾಗಿ ಹೇಳದ ವೈದ್ಯರು, ಈ ಬಗ್ಗೆ ಕೆಲ ಪರೀಕ್ಷೆಗಳ ಅಗತ್ಯವಿದೆ ಎಂದು ಮಾತ್ರ ಹೇಳಿದ್ದಾರೆ.

ಈ ಹಿಂದೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ತಾನು ಲೈಂಗಿಕ ದುರ್ಬಲ ಎಂದು ಹೇಳಿಕೊಳ್ಳುವ ಮೂಲಕ ರಾಮ್ ರಹೀಂ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದ. ರಾಮ್ ರಹೀಂ ಹೇಳಿಕೆಯನ್ನು ಖಂಡಿಸಿದ್ದ ನ್ಯಾಯಾಲಯ ನೀನು  ಲೈಂಗಿಕ ದುರ್ಬಲನಾಗಿದ್ದರೆ ನಿನ್ನ ಮಕ್ಕಳು ನಿನ್ನವರು ಅಲ್ಲವೇ ಎಂದು ಪ್ರಶ್ನೆ ಮಾಡಿತ್ತು. ಇದೀಗ ಸ್ವತಃ ವೈದ್ಯರೇ ರಾಮ್ ರಹೀಂ ಲೈಂಗಿಕ ವ್ಯಸನಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT