ದೇಶ

ದೆಹಲಿ: ಸಿಬ್ಬಂದಿಗಳ ನಿರ್ಲಕ್ಷ್ಯ, ತೆರೆದ ಬಾಗಿಲಿನ ಮೆಟ್ರೋದಲ್ಲಿ ಸಾರ್ವಜನಿಕರ ಪ್ರಯಾಣ!

Manjula VN
ನವದೆಹಲಿ: ಮೆಟ್ರೋ ಪ್ರಯಾಣಿಕರನ್ನು ಬೆಚ್ಚಿ ಬೀಳಿಸುವ ಘಟನೆಯೊಂದು ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಬಾಗಿಲು ಇಲ್ಲದೇ ಮೆಟ್ರೋ ರೈಲೊಂದು ಚಲಿಸಿದೆ. 
ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಹೆದಹಿಯ ಚಾವ್ರಿ ಬಜಾರ್ ನಿಂದ ಕಾಶ್ಮೀರ್ ಗೇಟ್ ವರೆಗೂ ದೆಹಲಿಯ ಮೆಟ್ರೋ ರೊಂದು ತೆರೆದ ಬಾಗಿಲಿನಲ್ಲಿ ಪ್ರಯಾಣ ಬೆಳೆಸಿದೆ. 
ಮೆಟ್ರೋ ರೈಲಿನ ಸಿಬ್ಬಂದಿಗಳ ನಿರ್ಲಕ್ಷ್ಯ ಹಾಗೂ ಈ ಅವ್ಯವಸ್ಥೆಯನ್ನು ಕಂಡ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಮೆಟ್ರೋ ಸಿಬ್ಬಂದಿಗಳು ತಾಂತ್ರಿಕ ಕಾರಣಗಳಿಂದಾಗಿ ಹೀಗೆ ಆಗಿದೆ ಎಂದು ಹೇಳಿಕೊಂಡಿದ್ದಾರೆ. 
SCROLL FOR NEXT