ದೇಶ

ಇಸಿಸ್ ಉಗ್ರರ ಕಪಿಮುಷ್ಠಿಯಲ್ಲಿದ್ದ ಕೇರಳ ಪಾದ್ರಿ ಟಾಮ್ ರಕ್ಷಣೆ

Vishwanath S
ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಉಗ್ರರ ಕಪಿಮುಷ್ಠಿಯಲ್ಲಿರುವ ಯೆಮೆನ್ ನಲ್ಲಿ ಅಪಹರಣಕ್ಕೀಡಾಗಿದ್ದ ಕೇರಳ ಮೂಲದ ಪಾದ್ರಿ ಟಾಮ್ ರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. 
2016ರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಯೆಮೆನ್ ನಲ್ಲಿನ ವೃದ್ಧಾಶ್ರಮದಿಂದ ಪಾದ್ರಿ ಟಾಮ್ ರನ್ನು ಅಪಹರಿಸಿದ್ದರು. ಸರಿಸುಮಾರು 17 ತಿಂಗಳ ಬಳಿಕ ಟಾಮ್ ರನ್ನು ಉಗ್ರರಿಂದ ರಕ್ಷಿಸಲಾಗಿದೆ. 
ಫಾದರ್ ಟಾಮ್ ರನ್ನು ರಕ್ಷಿಸಲಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿದ್ದಾರೆ.
ಯೆಮನ್ ನ ಮದರ್ ತೆರೆಸಾ ಮಿಷನರಿಯಲ್ಲಿ ಟಾಮ್ ಅವರು ಸೇವೆ ಸಲ್ಲಿಸುತ್ತಿದ್ದರು. ಯೆಮನ್ ನಲ್ಲಿ 2016ರ ಮಾರ್ಚ್ 4ರಂದು ವೃದ್ಧಾಶ್ರಮದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ 16 ಮಂದಿಯನ್ನು ಹತ್ಯೆಗೈಯ್ಯಲಾಗಿತ್ತು. ಈ ವೇಳೆ ಫಾದರ್ ಟಾಮ್ ಉಳುನ್ನಲಿಲ್ ಅವರನ್ನು ನಾಲ್ವರು ಬಂದೂಕುದಾರಿಗಳು ಅಪಹರಿಸಿದ್ದರು.
SCROLL FOR NEXT