ದೇಶ

ಮಕ್ಕಳು ಸುರಕ್ಷಿತವಾಗಿಲ್ಲ ಎಂದಾದರೆ, ಭಾರತ ದೇಶ ಸಹ ಸುರಕ್ಷಿತವಾಗಿಲ್ಲ: ಕೈಲಾಶ್ ಸತ್ಯಾರ್ಥಿ

Manjula VN
ತ್ರಿವೆಂಡ್ರಮ್: ಭಾರತ ಎಷ್ಟೇ ಶ್ರೀಮಂತ ಪರಂಪರೆ, ಸಂಸ್ಕೃತಿ ಹಾಗೂ ಪ್ರಜಾಪ್ರಭುತ್ವವನ್ನ ಹೊಂದಿದ್ದರೂ, ದೇಶದಲ್ಲಿ ಮಕ್ಕಳು ಸುರಕ್ಷಿತವಾಗಿಲ್ಲ ಎಂದರೆ ರಾಷ್ಟ್ರ ಕೂಡ ಸುರಕ್ಷಿತವಾಗಿರುವುದಿಲ್ಲ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಹಾಗೂ ಸಾಮಾಜಿಕ ಹೋರಾಟಗಾರ ಕೈಲಾಶ್ ಸತ್ಯಾರ್ಥಿಯವರು ಮಂಗಳವಾರ ಹೇಳಿದ್ದಾರೆ. 
ರಿಯಾನ್ ಶಾಲೆ 7 ವರ್ಷದ ವಿದ್ಯಾರ್ಥಿ ಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಭಾರತ ಅತ್ಯಂತ ಹಳೆಯ ಹಾಗೂ ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿರುವ ದೇಶವಾಗಿದೆ. ವಿಶ್ವದಲ್ಲಿಯೇ ನಾವು ಅತ್ಯಂತ ದೊಡ್ಡ ಪ್ರಜಾಪ್ರಭುತ್ವನ್ನು ಹೊಂದಿದ್ದೇವೆ. ಆದರೆ, ದೇಶದಲ್ಲಿರುವ ಮಕ್ಕಳು ಅಪಾಯದಲ್ಲಿದ್ದರೆ, ಭಾರತ ಕೂಡ ಅಪಾಯದಲ್ಲಿದೆ ಎಂದರ್ಥ. ಮಕ್ಕಳು ಸುರಕ್ಷಿತವಾಗಿಲ್ಲ ಎಂದರೆ ದೇಶ ಕೂಡ ಸುರಕ್ಷಿತವಾಗಿರುವುದಿಲ್ಲ ಎಂದು ಹೇಳಿದ್ದಾರೆ. 
ಮಕ್ಕಳಿಗಾಗಿರುವ ನನ್ನ ಹೋರಾಟ ಎಂದಿಗೂ ನಿಲ್ಲುವುದಿಲ್ಲ. ನನ್ನ ಹೋರಾಟ ನಿರಂತರವಾದದ್ದು. ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ನಿಲ್ಲುವವರೆಗೂ ಹಾಗೂ ಮಕ್ಕಳು ಸುರಕ್ಷಿತವಾಗಿರುವವರೆಗೂ ನಾನು ಹೋರಾಡುತ್ತೇನೆಂದು ತಿಳಿಸಿದ್ದಾರೆ. 
SCROLL FOR NEXT