ದೇಶ

ಧೈರ್ಯವಿದ್ದರೆ ಚುನಾವಣೆ ಘೋಷಿಸಿ: ಪಳನಿಸ್ವಾಮಿಗೆ ದಿನಕರನ್ ಸವಾಲು!

Srinivasamurthy VN
ಚೆನ್ನೈ: ತಮಗೆ ಬಹುಮತವಿದೆ ಎಂದು ಬೀಗುತ್ತಿರುವ ಸಿಎಂ ಪಳನಿಸ್ವಾಮಿ ಮತ್ತು ಅವರ ತಂಡ ಧೈರ್ಯವಿದ್ದರೇ ಈಗಲೇ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆ ಘೋಷಿಸಲಿ ಎಂದು ಎಐಎಡಿಎಂಕೆ ಪಕ್ಷದ ಉಚ್ಠಾಟಿತ  ಮುಖಂಡ ಟಿಟಿವಿ ದಿನಕರನ್ ಹೇಳಿದ್ದಾರೆ.
ಚೆನ್ನೈನಲ್ಲಿ ಇಂದು ಎಐಎಡಿಎಂಕೆ ಪಕ್ಷದ ಸಾಮಾನ್ಯ ಸಭೆಯಲ್ಲಿ ಶಶಿಕಲಾ ಮತ್ತು ಟಿಟಿವಿ ದಿನಕರನ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಟಿಟಿವಿ ದಿನಕರನ್, ಎಐಎಡಿಎಂಕೆ ಪಕ್ಷದ  ಶಾಸಕರು ಸಿಎಂ ಪಳನಿ ಸ್ವಾಮಿ ವಿರುದ್ಧ ಅವಿಶ್ವಾಸದಿಂದಿದ್ದಾರೆ. ಇದೇ ಕಾರಣಕ್ಕೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹಲವು ಸಚಿವರು ನಾವು ಡಿಎಂಕೆ ಪಕ್ಷದೊಂದಿಗೆ ಕೈ ಜೋಡಿಸಿದ್ದೇವೆ ಎಂದು ಆರೋಪಿಸುತ್ತಿದ್ದಾರೆ  ಎಂದು ಹೇಳಿದರು.

ಇದೇ ವೇಳೆ ಪ್ರಸ್ತುತ ಇರುವ ಸಿಎಂ ಪಳನಿಸ್ವಾಮಿ ಸರ್ಕಾರವನ್ನು ನಾವು ಕಿತ್ತೊಗೆದೇ ತೀರುತ್ತೇವೆ ಎಂದು ಹೇಳಿರುವ ದಿನಕರನ್, ನಿಮಗೆ ಬಹುಮತವಿದೆ ಎಂದು ಹೇಳುತ್ತಿರುವ ಪಳನಿ ಸ್ವಾಮಿ ಧೈರ್ಯವಿದ್ದರೆ ಈಗಲೇ  ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆ ಘೋಷಿಸಲಿ ಎಂದು ಬಹಿರಂಗ ಸವಾಲೆಸೆದಿದ್ದಾರೆ. ಅಂತೆಯೇ ತಮಗೆ 21 ಶಾಸಕರ ಬೆಂಬಲವಿದ್ದು, ಪಳನಿಸ್ವಾಮಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಬಹುಮತ ಕಳೆದುಕೊಂಡಿರುವ  ಪಳನಿಸ್ವಾಮಿಗೆ ಸರ್ಕಾರ ನಡೆಸುವ ಯಾವುದೇ ನೈತಿಕತೆ ಇಲ್ಲ ಎಂದು ಕಿಡಿ ಕಾರಿದ್ದಾರೆ.
SCROLL FOR NEXT