ದೇಶ

ಭಾರತ-ಬೆಲಾರಸ್ ದ್ವಿಪಕ್ಷೀಯ ಸಹಕಾರ: 10 ಒಪ್ಪಂದಗಳಿಗೆ ಸಹಿ

Raghavendra Adiga
ನವದೆಹಲಿ: ಭಾರತ ಮತ್ತು ಬೆಲಾರಸ್ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆ, ಜಂಟಿ ಅಭಿವೃದ್ಧಿ ಕಾರ್ಯಗಳು ಮತ್ತು ಮಿಲಿಟರಿ ಉತ್ಪನ್ನಗಳ ತಯಾರಿಕೆಯನ್ನು ಉತ್ತೇಜಿಸುವ 10 ಒಪ್ಪಂದಗಳಿಗೆ ಇಂದು  ಸಹಿ ಹಾಕಿವೆ. ಈ ಒಪ್ಪಂದದಿಂದಾಗಿ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವೇಗ ಸಿಗಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬೆಲಾರಸ್ ಅಧ್ಯಕ್ಷ ಎ. ಜಿ. ಲುಕಾಶೆಂಕೋ ತಮ್ಮ ವಿಸ್ತೃತ ಮಾತುಕತೆಗಳಲ್ಲಿ, ಎರಡೂ ದೇಶಗಳ ನಡುವಿನ ಆರ್ಥಿಕ ಸಹಕಾರಕ್ಕೆ ಒತ್ತು ನೀಡಿದರು. ಎರದೂ ದೇಶಗಳಲ್ಲಿ ವ್ಯಾಪಾರ ಮತ್ತು ಬಂಡವಾಳವನ್ನು ಉತ್ತೇಜಿಸಲು ಭಾರೀ ಅವಕಾಶಗಳು ಇದೆ ಎಂದು ಅವರು ಹೇಳಿದ್ದಾರೆ..
'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮದಡಿಯಲ್ಲಿ ರಕ್ಷಣಾ ವಲಯದಲ್ಲಿ ಜಂಟಿ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ನಾವು ಪ್ರೋತ್ಸಾಹಿಸುತ್ತೇವೆ ಎಂದು ಮೋದಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಅವರು ಮತ್ತು ಲುಕಾಶೆಂಕೋ ಭಾರತ-ಬೆಲಾರಸ್ ಪಾಲುದಾರಿಕೆಯ "ನಕಾಶೆ" ಯನ್ನು ಪರಿಶೀಲಿಸಿದರು ಮತ್ತು ಅದನ್ನು ಹೇಗೆ ಇನ್ನೂ ಹೆಚ್ಚು ವಿಸ್ತಾರ ಗೊಳಿಸಬಹುದೆನ್ನುವುದರ ಕುರಿತು ವಿಚಾರ ವಿನಿಮಯ ಮಾಡಿಕೊಂಡರು.
ತೈಲ, ಅನಿಲ, ಶಿಕ್ಷಣ, ಕ್ರೀಡೆಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಈ ಒಪ್ಪಂದಗಳು ಅವಕಾಶ ಮಾಡಿಕೊದಲಿದೆ..
SCROLL FOR NEXT