ಯೋಗ ಗುರು ಬಾಬಾ ರಾಮ್'ದೇವ್ 
ದೇಶ

ನಕಲಿ ಬಾಬಾಗಳ ಪಟ್ಟಿ: ಯಾರನ್ನು ನಂಬಬೇಕೆಂಬುದನ್ನು ಜನರೇ ನಿರ್ಧರಿಸಬೇಕು- ಬಾಬಾ ರಾಮ್'ದೇವ್

ನಡವಳಿಕೆ ಹಾಗೂ ವರ್ತನೆಗಳನ್ನು ನೋಡಿ ಯಾರನ್ನು ನಂಬಬೇಕು ಹಾಗೂ ನಂಬಬಾರದು ಎಂಬುದನ್ನು ಜನರೇ ನಿರ್ಧರಿಸಬೇಕು ಎಂದು ಯೋಗ ಗುರು ಬಾಬಾ ರಾಮ್'ದೇವ್ ಅವರು...

ನಾಗ್ಪುರ: ನಡವಳಿಕೆ ಹಾಗೂ ವರ್ತನೆಗಳನ್ನು ನೋಡಿ ಯಾರನ್ನು ನಂಬಬೇಕು ಹಾಗೂ ನಂಬಬಾರದು ಎಂಬುದನ್ನು ಜನರೇ ನಿರ್ಧರಿಸಬೇಕು ಎಂದು ಯೋಗ ಗುರು ಬಾಬಾ ರಾಮ್'ದೇವ್ ಅವರು ಮಂಗಳವಾರ ಹೇಳಿದ್ದಾರೆ. 
ಅಸಾರಾಂ ಬಾಪು, ಗುರ್ಮಿತ್ ರಾಮ್ ರಹೀಮ್ ಸಿಂಗ್, ರಾಧೇ ಮಾ, ನಿತ್ಯಾನಂದ ಪ್ರಕರಣಗಳು ದೇಶದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಹಿನ್ನಲೆಯಲ್ಲಿ ಸಂತರ ಉನ್ನತ ಸಂಘಟನೆಯಾಗಿರುವ ಅಖಿಲ ಭಾರತೀಯ ಅಖಾಡ ಪರಿಷತ್ (ಎಬಿಎಪಿ) ನಕಲಿ ಬಾಬಾಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. 
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಾಬಾ ರಾಮ್ ದೇವ್ ಅವರು, ಬಾಬಾಗಳ ವರ್ತನೆಗಳು ಹಾಗೂ ನಡವಳಿಕೆಗಳನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಅವರ ಉದ್ದೇಶಗಳೇನಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಕರ್ಮಗಳನ್ನು ನಾವು ನಂಬುವುದಾದರೆ, ಯಾವುದೇ ನಕಲಿ ಬಾಬಾಗಳು ಯಾರ ಮೇಲೂ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಭಾರತದ ಸಂಸ್ಕೃತಿ ಅತ್ಯಂತ ಪುರಾತನದ್ದು. ಶುದ್ಧತೆ, ದೈವಿಕ ಜ್ಞಾನವನ್ನು ಹೊಂದಿರುವ ಸಾಕಷ್ಟು ಸಂಸತರಿದ್ದಾರೆ. ಇಡೀ ವಿಶ್ವ ಇಂತಹವರಿಂದ ಪಾಠವನ್ನು ಕಲಿತು, ಇಂತಹವರ ಮೇಲೆ ನಂಬಿಕೆಯನ್ನು ಇಡಬೇಕು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ