ಬೀಜಿಂಗ್: ಭಾರತದ ಮೊದಲ ಬುಲೆಟ್ ರೈಲು ನಿರ್ಮಾಣಕ್ಕಾಗಿ ಜಪಾನ್-ಭಾರತ ರೈಲು ಸಹಕಾರವನ್ನು ವಿಸ್ತರಿಸುತ್ತಿರುವುದರ ಬಗ್ಗೆ ಚೀನಾ ಪ್ರತಿಕ್ರಿಯೆ ನೀಡಿದ್ದು, ಭಾರತ-ಜಪಾನ್ ರೈಲು ಸಹಕಾರದ ಬಗ್ಗೆ ಸಂತಸವಿದೆ ಎಂದು ಹೇಳಿದೆ.
ಜಪಾನ್-ಭಾರತ ರೈಲು ಸಹಕಾರ ವೃದ್ಧಿಸುತ್ತಿರುವ ಬೆಳವಣಿಗೆಯ ಬಗ್ಗೆ ಸಂತಸವಿದ್ದು, ಈ ರೀತಿಯ ಮೂಲಸೌಕರ್ಯ ಯೋಜನೆಗಳನ್ನು ಉತ್ತೇಜಿಸಲು ಚೀನಾ ಸಿದ್ಧವಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಿಂಗ್ ಶೌಂಗ್ ಹೇಳಿದ್ದಾರೆ.
ರೈಲ್ವೆ ಸಹಕಾರಕ್ಕೆ ಸಂಬಂಧಪಟ್ಟಂತೆ ಅದು ಜಪಾನ್-ಭಾರತದ ನಡುವಿನ ರಾಜಕೀಯ ಸಹಕಾರದ ಒಂದು ಭಾಗವಾಗಿದೆ ಎಂದು ಚೀನಾ ಅಭಿಪ್ರಾಯಪಟ್ಟಿದೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ಹೇಳಿಕೆ ಮಹತ್ವ ಪಡೆದುಕೊಂಡಿದೆ.