ರಾಜಕೀಯ ಅಸ್ಥಿತ್ವಕ್ಕಾಗಿ ಲಾಲು ನೇತೃತ್ವದ ಆರ್ ಜೆಡಿ ಸೇರಿ: ಶರದ್ ಯಾದವ್ ಗೆ ಜೆಡಿಯು ಸಲಹೆ
ಹಿರಿಯ ಬಂಡಾಯ ನಾಯಕ ಶರದ್ ಯಾದವ್ ಅವನ್ನು ಲಾಲೂ ಪ್ರಸಾದ್ ನೇತೃತ್ವದ ಆರ್ ಜೆಡಿ ಪಕ್ಷ ಸೇರುವಂತೆ...
ಪಾಟ್ನಾ: ಬಿಹಾರದಲ್ಲಿರುವ ಆಡಳಿತಾರೂಢ ಜೆಡಿಯು ಹಿರಿಯ ಬಂಡಾಯ ನಾಯಕ ಶರದ್ ಯಾದವ್ ಅವನ್ನು ಲಾಲೂ ಪ್ರಸಾದ್ ನೇತೃತ್ವದ ಆರ್ ಜೆಡಿ ಪಕ್ಷ ಸೇರುವಂತೆ ಸಲಹೆ ನೀಡಿದೆ.
ಶರದ್ ಯಾದವ್ ಯಾವುದೇ ವಿಳಂಬ ಮಾಡದೇ ಆರ್ ಜೆಡಿ ಸೇರಬೇಕು ಮತ್ತು ಪಕ್ಷದ ಲ್ಯಾಟೀನ್ ಚಿಹ್ನೆಯನ್ನು ತಮ್ಮದೆಂದು ಒಪ್ಪಿಕೊಳ್ಳಬೇಕು ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ಸಲಹೆ ನೀಡಿದ್ದಾರೆ.
ಸರಿಯಾದ ದಾಖಲೆಗಳನ್ನು ನೀಡದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಶರದ್ ಯಾದವ್ ಅವರ ಪಕ್ಷವನ್ನು ಮೂಲ ಜೆಡಿಯು ಎಂದು ಪರಿಗಣಿಸಬೇಕೆಂದು ಮಾಡಿದ್ದ ಮನವಿಯನ್ನು ಪರಿಗಣಿಸಲಿಲ್ಲ.
ರಾಜಕೀಯದಲ್ಲಿ ಉಳಿಯಬೇಕೆಂದರೇ ಆರ್ ಜೆಡಿ ಸೇರುವುದನ್ನು ಬಿಟ್ಟರೇ ಶರದ್ ಯಾದವ್ ಅವರಿಗೆ ಬೇರೆ ಆಯ್ಕೆಯಿಲ್ಲ ಎಂದು ನೀರಜ್ ಕುಮಾರ್ ಹೇಳಿದ್ದಾರೆ. ಲಾಲು ಕುಟುಂಬಕ್ಕೆ ಯಾದವ್ ಅಂಕಲ್ ಆಗುತ್ತಿದ್ದಾರೆ. ಶೀಘ್ರವೇ ಶರದ್ ಯಾದವ್ ರಾಜ್ಯಸಭೆ ಸದಸ್ಯತ್ವವನ್ನು ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.