ಬುಲೆಟ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ ಹಾಗೂ ಶಿಂಜೋ ಅಬೆ 
ದೇಶ

ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಜಪಾನ್ ಪ್ರಧಾನಿ ಶಿಂಜೋ ಅಬೆ, ಪ್ರಧಾನಿ ಮೋದಿ ಚಾಲನೆ

ಭಾರತದ ಮೊಟ್ಟಮೊದಲ ಬುಲೆಟ್ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ವಿದ್ಯುಕ್ತ ಚಾಲನೆ ನೀಡಿದರು.

ಅಹ್ಮದಾಬಾದ್: ಭಾರತದ ಮೊಟ್ಟಮೊದಲ ಬುಲೆಟ್ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ವಿದ್ಯುಕ್ತ ಚಾಲನೆ ನೀಡಿದರು.
ಅಹ್ಮದಾಬಾದ್ ನ ಅಥ್ಲೆಟಿಕ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಭಯ ನಾಯಕರು ಸ್ವಿಚ್ ಪ್ರೆಸ್ ಮಾಡುವ ಮೂಲಕ ಶಂಕುಸ್ಥಾಪನೆ ಮಾಡಿದರು.  ಬಳಿಕ ಉಭಯ ನಾಯಕರಿಗೆ  ಅಧಿಕಾರಿಗಳು ಬುಲೆಟ್ ರೈಲಿನ ಹಳಿ ಮಾರ್ಗದ ಮಾದರಿಯ ಮೂಲಕ ಯೋಜನೆಯ ಕುರಿತು ಮಾಹಿತಿ ನೀಡಿದರು. ಅಹ್ಮದಾಬಾದ್ ನಿಂದ ಮುಂಬೈ ನಡುವಿನ ಸುಮಾರ 509 ಕಿ.ಮೀ ದೂರವನ್ನು ಈ ಅತಿ ವೇಗದ ರೈಲು ಕೇವಲ  2.58 ಗಂಟೆಗಳಲ್ಲಿ ತಲುಪಲಿದೆ.

ಗುಜರಾತ್ ನ ಅಹ್ಮದಾಬಾದ್ ನಿಂದ ಮುಂಬೈಗೆ ಪ್ರಪ್ರಥಮ ಬುಲೆಟ್ ರೈಲು ಸಂಚಾರ ಮಾಡಲಿದ್ದು, ಈ ಯೋಜನೆ ಪೂರ್ಣಗೊಳ್ಳಲು 2022ರವರೆಗೂ ಕಾಲಮಿತಿ ವಿಧಿಸಲಾಗಿದೆ. ಎರಡು ಪ್ರಮುಖ ನಗರಗಳ ನಡುವಿನ ಸುಮಾರು  500 ಕಿ.ಮೀ ದೂರದ ಬುಲೆಟ್ ರೈಲು ಯೋಜನೆಗೆ ಇಂದು ಉಭಯ ನಾಯಕರು ಅಡಿಗಲ್ಲು ಹಾಕುವ ಮೂಲಕ ಚಾಲನೆ ನೀಡಲಿದ್ದಾರೆ. ತಜ್ಞರು ಅಭಿಪ್ರಾಯಪಟ್ಟಿರುವಂತೆ ಈ ಯೋಜನೆ ಪೂರ್ಣಗೊಂಡ ಬಳಿಕ ಕೇವಲ 2 ಗಂಟೆಗಳಲ್ಲಿ  ಅಹ್ಮದಾಬಾದ್ ನಿಂದ ಮುಂಬೈ ಸಂಚರಿಸಬಹುದಾಗಿದೆ.

ಈ ಬೃಹತ್ ಯೋಜನೆ ಒಟ್ಟು 108 ಲಕ್ಷ ಕೋಟಿ ಹಣ ಖರ್ಚಾಗಲಿದ್ದು, ಜಪಾನ್ ಸರ್ಕಾರ ಈ ಯೋಜನೆಗಾಗಿ ಶೇ.81 ರಷ್ಟು ಅಂದರೆ ಸುಮಾರು 88 ಸಾವಿರ ಕೋಟಿ ಹಣ ಸಾಲ ನೀಡಲು ಸಿದ್ಧವಾಗಿದೆ. ಇಂತಹ ಸಾಲಗಳಿಗೆ  ವಿಶ್ವಬ್ಯಾಂಕ್ ವಾರ್ಷಿಕ ಶೇ.5 ರಿಂದ 7ರವರೆಗೂ  ಬಡ್ಡಿ ವಿಧಿಸುತ್ತದೆ. ಆದರೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಹಾಲಿ ಬುಲೆಟ್ ರೈಲು ಯೋಜನೆ ಭಾರತ-ಜಪಾನ್ ಸ್ನೇಹದ ದ್ಯೋತಕವಾಗಿರುವುದರಿಂದ ಶೇ.0.1ರಷ್ಟು  ಬಡ್ಡಿದರಕ್ಕೆ ಸಾಲ ನೀಡಿದ್ದಾರೆ.

ವಿಶ್ವ ಬ್ಯಾಂಕ್ ಸಾಲದ ಗಡುವು 25-35 ವರ್ಷಗಳಾಗಿದೆ, ಜಪಾನ್ ಸರ್ಕಾರ ಭಾರತಕ್ಕೆ 15 ವರ್ಷಗಳ ಹೆಚ್ಚುವರಿ ಕಾಲ ಮಿತಿಯನ್ನೂ ನೀಡಿದೆ. ಅದರಂತೆ ಭಾರತ ಸರ್ಕಾರ 50 ವರ್ಷಗಳಲ್ಲಿ ಈ ಸಾಲವನ್ನು ಜಪಾನ್ ಸರ್ಕಾರಕ್ಕೆ  ವಾಪಸ್ ಮಾಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?