ದೇಶ

ವರದಿಗಾರರ ಪ್ರಶ್ನೆ ಕೇಳಿ ತನ್ನನ್ನೇ ಕತ್ತೆ ಎಂದು ಕರೆದುಕೊಂಡ ಅಸಾರಾಮ್ ಬಾಪು!

Srinivas Rao BV
ಜೋಧ್ ಪುರ: ಅಖಿಲ ಭಾರತೀಯ ಅಖಾಡ ಪರಿಷತ್ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಿರಿಕಿರಿ ಎದುರಿಸಿರುವ ಅಸಾರಾಮ್ ಬಾಪು ತಮ್ಮನ್ನು ತಾವೇ ಕತ್ತೆ ಎಂದು ಕರೆದುಕೊಂಡಿದ್ದಾರೆ. 
ಅತ್ಯಾಚಾರ ಆರೋಪ ಎದುರಿಸುತ್ತಿರುವ ಅಸಾರಾಮ್ ಬಾಪು ಅವರನ್ನು ಅಖಿಲ ಭಾರತೀಯ ಅಖಾಡ ಪರಿಷತ್ ನಕಲಿ ಸಾಧು ಎಂದು ಹೇಳಿತ್ತು. ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮುಜುಗರಕ್ಕೊಳಗಾದ ಅಸಾರಾಮ್ ಬಾಪು ತಮ್ಮನ್ನು ತಾವೇ ಕತ್ತೆ ಎಂದು ಕರೆದುಕೊಂಡಿದ್ದಾರೆ. 
ಹಿಂದೂ ಸಾಧು ಸಂತರ ಪರಮೋಚ್ಛ ಸಂಘಟನೆಯಾಗಿರುವ ಅಖಾಡ ಪರಿಷತ್ ಅಸಾರಾಮ್ ಬಾಪು ಅವರನ್ನು ಸಂತನೂ ಅಲ್ಲ ಬೋಧಕನೂ ಅಲ್ಲ ಎಂದು ಹೇಳಿತ್ತು. ಅಸಾರಾಮ್ ಬಾಪು ಸಾಧು ಸಂತರ ವರ್ಗಕ್ಕೆ ಸೇರಿದವರಲ್ಲವೇ ಎಂಬ ಅರ್ಥ ಬರುವ ರೀತಿಯಲ್ಲಿ ಪ್ರಶ್ನಿಸಿದಾಗ ಅಸಾರಾಮ್ ಬಾಪು "ಕತ್ತೆಗಳ ವರ್ಗಕ್ಕೆ" ಎಂದು ಹೇಳಿದ್ದು ತಮ್ಮನ್ನು ತಾವೇ ಕತ್ತೆ ಎಂದು ಕರೆದುಕೊಂಡಿದ್ದಾರೆ. 
SCROLL FOR NEXT