ದೇಶ

ಎಐಎಡಿಎಂಕೆ ಬಂಡಾಯ ಶಾಸಕರ ವಿರುದ್ಧ ಕಮಲ್ ಹಾಸನ್ ವಾಗ್ದಾಳಿ

Lingaraj Badiger
ಚೆನ್ನೈ: ತಮಿಳುನಾಡು ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಕರ್ನಾಟಕದ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಎಐಎಡಿಎಂಕೆ ಬಂಡಾಯ ಶಾಸಕರ ವಿರುದ್ಧ ತಮಿಳು ಮೆಗಾ ಸ್ಟಾರ್ ಕಮಲ್ ಹಾಸನ್ ಅವರು ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆಯಷ್ಟೇ ತಮಿಳುನಾಡು ಸರ್ಕಾರ ಪ್ರತಿಭಟನಾ ನಿರತ ಸರ್ಕಾರಿ ನೌಕರರಿಗೆ, ಕೆಲಸ ಮಾಡಿದ್ರೆ ಸಂಬಳ ಇಲ್ಲದಿದ್ದರೆ ಇಲ್ಲ ಎಂಬ ಆದೇಶ ನೀಡಿತ್ತು. ಇದೇ ಮಾನದಂಡ ಬಂಡಾಯ ಶಾಸಕರಿಗೂ ಅನ್ವಯವಾಗಬೇಕು ಎಂದು ಕಮಲ್ ಹಾಸನ್ ಅವರು ಟ್ವೀಟ್ ಮಾಡಿದ್ದಾರೆ.
ಕೆಲಸ ಮಾಡಿದ್ರೆ ಸಂಬಳ ಇಲ್ಲದಿದ್ದರೆ ಇಲ್ಲ ಎಂಬ ನಿಯಮ ಕೇವಲ ಸರ್ಕಾರಿ ನೌಕರರಿಗೆ ಏಕೆ? ಕುದುರೆ ವ್ಯಾಪಾರ ನಡೆಸುವ, ಐಶಾರಾಮಿ ರೆಸಾರ್ಟ್ ಗಳಲ್ಲಿ ತಂಗಿರುವ ಶಾಸಕರಿಗೆ ಏಕಿಲ್ಲ? ಎಂದು ಕಮಲ್ ಪ್ರಶ್ನಿಸಿದ್ದಾರೆ.
ಎಐಎಡಿಎಂಕೆಯ ಉಚ್ಚಾಟಿತ ನಾಯಕ ಟಿಟಿವಿ ದಿನಕರನ್ ಬೆಂಬಲಿತ 19 ಶಾಸಕರು ಕಳೆದ ಒಂದು ವಾರದಿಂದ ಕೊಡಗಿನ ರೆಸಾರ್ಟ್ ನಲ್ಲಿ ತಂಗಿದ್ದಾರೆ.
SCROLL FOR NEXT