ಚೆನ್ನೈ ಸೇರಿದಂತೆ ದೇಶದ ಆರು ರೈಲು ನಿಲ್ದಾಣಗಳಲ್ಲಿ ರಿಸರ್ವೇಶನ್ ಚಾರ್ಟ್ ಹಾಕುವ ವ್ಯವಸ್ಥೆಗೆ ಕಟ್! 
ದೇಶ

ಚೆನ್ನೈ ಸೇರಿದಂತೆ ದೇಶದ ಆರು ರೈಲು ನಿಲ್ದಾಣಗಳಲ್ಲಿ ರಿಸರ್ವೇಶನ್ ಚಾರ್ಟ್ ಹಾಕುವ ವ್ಯವಸ್ಥೆಗೆ ಕಟ್!

ಚೆನ್ನೈ ಕೇಂದ್ರ ಹಾಗೂ ದೇಶದ ಇತರ 6 ಸ್ಟೇಷನ್ ಗಳಲ್ಲಿ ರಿಸರ್ವೇಷನ್ ಚಾರ್ಟ್ ಹಾಕುವ ಪದ್ಧತಿ ಶೀಘ್ರವೇ ಅಂತ್ಯವಾಗಲಿದೆ.

ಚೆನ್ನೈ: ಚೆನ್ನೈ ಕೇಂದ್ರ ಹಾಗೂ ದೇಶದ ಇತರ 6 ಸ್ಟೇಷನ್ ಗಳಲ್ಲಿ ರಿಸರ್ವೇಷನ್ ಚಾರ್ಟ್ ಹಾಕುವ ಪದ್ಧತಿ ಶೀಘ್ರವೇ ಅಂತ್ಯವಾಗಲಿದೆ. 
ರಿಸರ್ವೇಷನ್ ಚಾರ್ಟ್ ಹಾಕುವ ಪದ್ಧತಿಯನ್ನು ನಿಲ್ಲಿಸಲು ರೈಲ್ವೆ ಮಂಡಳಿ ನಿರ್ಧರಿಸಿದ್ದು, ನವದೆಹಲಿ, ನಿಜಾಮುದ್ದೀನ್, ಮುಂಬೈ ಛತ್ರಪತಿ ಶಿವಾಜಿ ಟರ್ಮಿನಸ್, ಹೌರಾ, ಸೆಲ್ದಾ, ಚೆನ್ನೈ ಸೆಂಟ್ರಲ್ ನ ನಿಲ್ದಾಣಗಳಲ್ಲಿ ರಿಸರ್ವೇಷನ್ ಚಾರ್ಟ್ ಹಾಕುವುದನ್ನು ನಿಲ್ಲಿಸಲಾಗುತ್ತದೆ. 
ಈ ಕುರಿತು ನವದೆಹಲಿ ಕಚೇರಿಯಿಂದ ಎಲ್ಲಾ ರೈಲ್ವೆ ಝೋನ್ ಗಳಿಗೂ ಸುತ್ತೋಲೆ ಹೊರಡಿಸಲಾಗಿದೆ. " ಹೊಸ ಪ್ರಸ್ತಾವನೆಗೆ ಹೆಚ್ಚಿನ ಪ್ರಚಾರ ನೀಡಿ ಶೀಘ್ರವೇ ಜಾರಿಗೊಳಿಸಲಾಗುತ್ತದೆ ಎಂದು ದಕ್ಷಿಣ ರೈಲ್ವೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 
ಬೆಂಗಳೂರು ಹಾಗೂ ಯಶವಂತಪುರದಿಂದ ಹೊರಡುವ ರೈಲುಗಳಲ್ಲಿ ರಿಸರ್ವೇಷನ್ ಚಾರ್ಟ್ ಗಳನ್ನು ಹಾಕುವ ಪದ್ಧತಿಯನ್ನು ಕಳೆದ ವರ್ಷ ಸೌತ್ ವೆಸ್ಟ್ರನ್ ರೈಲ್ವೆ ಕೈಬಿಟ್ಟಿತ್ತು. ಇದಾದ ಬಳಿಕ ರೈಲ್ವೆ ಮಂಡಳಿ ಎಲ್ಲಾ 6 ಪ್ರಮುಖ ಸ್ಟೇಷನ್ ಗಳಲ್ಲಿಯೂ ರಿಸರ್ವೇಷನ್ ಚಾರ್ಟ್ ಹಾಕುವ ಪದ್ಧತಿಯನ್ನು ಕೈಬಿಡಲು ನಿರ್ಧರಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಕಾವೇರಿ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ಆರಂಭ, ಡಿಕೆಶಿ ಎದುರೇ ‘5 ವರ್ಷ ಸಿದ್ದರಾಮಯ್ಯ ಸಿಎಂ’ ಘೋಷಣೆ ಕೂಗಿದ ಅಭಿಮಾನಿಗಳು..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಶಿಫ್ಟ್: ಅಹಿಂದ ಸಮೀಕರಣಕ್ಕೆ ಮಾಸ್ಟರ್‌ಪ್ಲ್ಯಾನ್, ಸತೀಶ್‌ ಜಾರಕಿಹೊಳಿಗೆ KPCC ಜವಾಬ್ದಾರಿ?

SCROLL FOR NEXT