ಮಸಾಜ್ ಎಫೆಕ್ಟ್: ಕುತ್ತಿಗೆ ನರಕ್ಕೆ ಹಾನಿ, ಪಾರ್ಶ್ವವಾಯುವಿಗೆ ತುತ್ತಾದ ವ್ಯಕ್ತಿ!
ದೆಹಲಿ: ಗ್ರಹಚಾರ ಕೆಟ್ಟರೆ ಹಗ್ಗನೂ ಹಾವಾಗತ್ತೆ ಅಂತಾರಲ್ಲಾ ಅಂಥಹದ್ದೇ ಘಟನೆ ದೆಹಲಿಯಲ್ಲಿ ನಡೆದಿದೆ. ಕ್ಷೌರ ಮಾಡಿಸಿಕೊಳ್ಳಲು ಹೋಗಿದ್ದ ವ್ಯಕ್ತಿಯೊಬ್ಬರಿಗೆ ಕ್ಷೌರಿಕರು ಮಸಾಜ್ ಮಾಡುತ್ತಿದ್ದಾಗ ಕುತ್ತಿಗೆ ಭಾಗದಲ್ಲಿನ ನರಕ್ಕೆ ಹಾನಿಯುಂಟಾಗಿದ್ದು ಪಾರ್ಶ್ವವಾಯುಗೆ ತುತ್ತಾಗಿದ್ದಾರೆ.
54 ವರ್ಷದ ಅಜಯ್ ಕುಮಾರ್ ಪಾಶ್ವವಾಯುಗೆ ತುತ್ತಾಗಿರುವ ವ್ಯಕ್ತಿಯಾಗಿದ್ದು ಮಸಾಜ್ ನಂತರ ಸ್ವಲ್ಪ ಸಮಯದಲ್ಲೇ ಅಜಯ್ ಕುಮಾರ್ ಗೆ ಉಸಿರಾಟದ ಸಮಸ್ಯೆಕಾಣಿಸಿಕೊಂಡಿದೆ. ವೈದ್ಯರ ಬಳಿ ತೆರಳಿದಾಗ ಮಸಾಜ್ ವೇಳೆ ಕುತ್ತಿಗೆಯಲ್ಲಿ ಬಿರುಕುಂಟಾಗಿ ಉಸಿರಾಟವನ್ನು ನಿಯಂತ್ರಿಸುವ ಫರೆನಿಕ್ ನರಗಳು ಹಾನಿಗೊಳಗಾಗಿರುವುದು ಪತ್ತೆಯಾಗಿದ್ದು ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದೆ.
ಪ್ರಸ್ತುತ ಅಜಯ್ ಕುಮಾರ್ ವೆಂಟಿಲೇಟರ್ ಮೂಲಕ ಸುಲಭವಾಗಿ ಉಸಿರಾಡಲು ವ್ಯವಸ್ಥೆ ಮಾಡಲಾಗಿದೆ.