ದೇಶ

12 ಲಕ್ಷ ರೈಲ್ವೆ ನೌಕರರಿಗೆ ದಸರಾ ಬೋನಸ್ ಘೋಷಿಸಿದ ಕೇಂದ್ರ ಸರ್ಕಾರ

Lingaraj Badiger
ನವದೆಹಲಿ: ರೈಲ್ವೆ ಇಲಾಖೆಯ 12 ಲಕ್ಷ ಉದ್ಯೋಗಿಗಳಿಗೆ 78 ದಿನಗಳಷ್ಟು ವೇತನವನ್ನು ಉತ್ಪಾದಕತೆ ಆಧರಿತ 'ದಸರಾ ಬೋನಸ್‌' ಆಗಿ ನೀಡುವುದಕ್ಕೆ ಬುಧವಾರ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ರೈಲ್ವೆ ಇಸಿಬ್ಬಂದಿ 78 ದಿನಗಳ ಬೋನಸ್‌ ಕೇಳಿದ್ದರು, ಅದಕ್ಕೆ ಕೇಂದ್ರ ಸಂಪುಟ ಇಂದು ಒಪ್ಪಿಗೆ ನೀಡಿದ್ದು, ಇದರಿಂದ ರೈಲ್ವೆ ಬೊಕ್ಕಸಕ್ಕೆ 2, 245.45 ಕೋಟಿ ರುಪಾಯಿ ಹೊರೆ ಬೀಳಲಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ದಸರಾ ರಜೆಗೂ ಮುನ್ನ ಈ ಬೋನಸ್ ನೀಡಲು ಸರ್ಕಾರ ನಿರ್ಧರಿಸಿದ್ದು, ಸರಾಸರಿ ಪ್ರತಿ ಉದ್ಯೋಗಿಗೆ 17,951 ರುಪಾಯಿ ಬೋನಸ್‌‌ ಸಿಗಲಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಕಳೆದ ಆರು ವರ್ಷಗಳಿಂದ ನೀಡಲಾಗುತ್ತಿರುವ ಉತ್ಪಾದಕತೆ ಆಧರಿತ 'ದಸರಾ ಬೋನಸ್‌' ಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ ಎಂದರು.
SCROLL FOR NEXT