ಜಮ್ಮು-ಕಾಶ್ಮೀರ: ಕಾಶ್ಮೀರದ ಪರಿಸ್ಥಿತಿಯ ನಿರ್ವಹಣೆಯಲ್ಲಿ ಮಾನವೀಯ ವಿಧಾನ ಅನುಸರಿಸುವಂತೆ ಪೊಲೀಸರಿಗೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಲಹೆ ನೀಡಿದ್ದಾರೆ.
ಪೊಲೀಸರು ಮಾನವೀಯ ವಿಧಾನ ಅನುಸರಿಸಿದರೆ ಜನತೆಗೆ ಅವರಲ್ಲಿನ ಭಯ ಹೋಗಿ ಭರವಸೆ ಮೂಡುತ್ತದೆ ಎಂದು ಮೆಹಬೂಬಾ ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿರುವ ಮೆಹಬೂಬಾ ಮುಫ್ತಿ,
ಜನರೆಡೆಗೆ ಮಾನವೀಯ ವಿಧಾನದಿಂದ ವರ್ತಿಸಿದರೆ ಸಮಾಜಘಾತುಕ ಶಕ್ತಿಗಳು ಸಹಜವಾಗಿಯೇ ದೂರವಾಗುತ್ತವೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.