ಟಾಟಾ ಸನ್ಸ್ ಸಮೂಹದ ಅಧ್ಯಕ್ಷ ರತನ್ ಟಾಟಾ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೊಂಡಾಡಿರುವ ಟಾಟಾ ಸನ್ಸ್ ಸಮೂಹದ ಅಧ್ಯಕ್ಷ ರತನ್ ಟಾಟಾ ಅವರು, ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ 'ನವಭಾರತ'ವಾಗಿ ನಿರ್ಮಾಣಗೊಳ್ಳಲಿದೆ ಎಂದು ಬುಧವಾರ ಹೇಳಿದ್ದಾರೆ.
ಖಾಸಗಿ ಸುದ್ದಿವಾಹನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪ್ರಧಾನಿ ಮೋದಿಯವರಿದೆ ಭಾರತವನ್ನು ಬದಲಾಯಿರುವ ಅವಕಾಶವನ್ನು ನೀಡಬೇಕು. ಎಕೆಂದರೆ ಅವರು ನವಭಾರತ ನಿರ್ಮಾಣದ ದೃಷ್ಟಾರತೆಯನ್ನು ಹೊಂದಿದ್ದಾರೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ 'ನವಭಾರತ'ವಾಗಿ ನಿರ್ಮಾಣಗೊಳ್ಳಲಿದೆ ಎಂದು ಹೇಳಿದ್ದಾರೆ.
ಮೋದಿಯವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಿನಿದಂಲೂ ನಾನು ಅವರನ್ನು ನೋಡಿದ್ದೇನೆ. ಅವರ ಕಾರ್ಯ ವೈಖರಿ, ಆಡಳಿತ ದಕ್ಷತೆಗಳನ್ನು ಗಮನಿಸಿಕೊಂಡು ಬಂದಿದ್ದೇನೆ. ಟಾಟಾ ನ್ಯಾನೋ ಕಾರ್ ಕಾರ್ಖಾನೆಯನ್ನು ಪಶ್ಚಿಮ ಬಂಗಾಳದಿಂದ ಗುಜರಾತ್ ರಾಜ್ಯಕ್ಕೆ ಸ್ಥಳಾಂತರಿಸುವುದಕ್ಕೆ ಕೇವಲ 3 ದಿನಗಳಲ್ಲಿ ಅಗತ್ಯವಿದ್ದ ಭೂಮಿಯನ್ನು ನೀಡಿದ್ದರು ಎಂದು ಸ್ಮರಿಸಿದ್ದಾರೆ.
ಪ್ರಧಾನಿ ಮೋದಿಯವರು ಭಾರತಕ್ಕೆ ಮತ್ತು ಭಾರತದ ಜನತೆಗೆ ನವಭಾರತ ಕೊಡುಗೆ ನೀಡುವುದಾಗಿ ಹೇಳಿದ್ದಾರೆ. ಅದ್ದರಿಂದ ಮೋದಿಯವರಿಗೆ ಒಂದು ಅವಕಾಶವನ್ನು ನೀಡಬೇಕು. ಮೋದಿ ನಾಯಕತ್ವದಲ್ಲಿ ಭಾರತವು ನವಭಾರತವಾಗಿ ರೂಪುಗೊಳ್ಳುವ ವಿಶ್ವಾಸ ಹಾಗೂ ಆಶಾವಾದವನ್ನು ನಾನು ಹೊಂದಿದ್ದೇನೆಂದು ತಿಳಿಸಿದ್ದಾರೆ.