ದೇಶ

ನಾವು ನಿರಾಶ್ರಿತರು, ಅಕ್ರಮ ವಲಸಿಗರಲ್ಲ: ಸುಪ್ರೀಂ ಗೆ ರೋಹಿಂಗ್ಯಾಗಳು

Srinivas Rao BV
ನವದೆಹಲಿ: ರೋಹಿಂಗ್ಯ ಅರ್ಜಿದಾರರೊಬ್ಬರು ಸುಪ್ರೀಂ ಕೋರ್ಟ್ ಗೆ ಹೇಳಿಕೆ ನೀಡಿದ್ದು ನಾವು ನಿರಾಶ್ರಿತರು, ಅಕ್ರಮ ವಲಸಿಗರಲ್ಲ ಎಂದಿದ್ದಾರೆ. 
ಮಯನ್ಮಾರ್ ನಲ್ಲಿ ನಮ್ಮನ್ನು ಶೋಷಿಸಲಾಗುತ್ತಿದ್ದು, ಆಶ್ರಯಕ್ಕಾಗಿ ಭಾರತಕ್ಕೆ ಬಂದಿದ್ದೇವೆ, ನಿರಾಶ್ರಿತರಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ನಾವು ಭದ್ರತೆಯನ್ನು ಪಡೆಯಲು ಅರ್ಹರಾಗಿದ್ದೇವೆ ಎಂದು ರೋಹಿಂಗ್ಯ ಅರ್ಜಿದಾರರು ಸುಪ್ರೀಂ ಕೋರ್ಟ್ ಗೆ ಹೇಳಿದ್ದಾರೆ. 
ರೋಹಿಂಗ್ಯಾದ ಅಕ್ರಮ ವಲಸಿಗರು ದೇಶದ ಭದ್ರತೆಗೆ ಅಪಾಯ ಎಂದು ಹೇಳಿದ್ದ ಕೇಂದ್ರ ಸರ್ಕಾರದ ಹೇಳಿಕೆಗೆ ವ್ಯತಿರಿಕ್ತವಾಗಿ ರೋಹಿಂಗ್ಯ ಅರ್ಜಿದಾರ ಮೊಹಮ್ಮದ್ ಸಲಿಮುಲ್ಲಾ, ಸಂವಿಧಾನದ ಆರ್ಟಿಕಲ್ 14 ಹಾಗೂ 21 ರ ಪ್ರಕಾರ ಭಾರತೀಯ ನಾಗರಿಕರು ಹಾಗೂ ಭಾರತೀಯ ನಗರಿಕರ ಹೊರತಾದವರಿಗೂ ಜೀವರಕ್ಷಣೆ ಹಾಗೂ ಸ್ವಾತಂತ್ರ್ಯ ನೀಡಬೇಕು ಎಂದು ಅರ್ಜಿಯಲ್ಲಿ ಹೇಳಿದ್ದಾರೆ. 
ಇನ್ನು ಕೇಂದ್ರ ಸರ್ಕಾರದ ವಾದವನ್ನು ತಿರಸ್ಕರಿಸಿರುವ ರೋಹಿಂಗ್ಯದ ಅಕ್ರಮ ವಲಸಿಗರು ಉಗ್ರರ ನಂಟು ಹೊಂದಿದ್ದಾರೆ ಎಂಬುದನ್ನು ಅಲ್ಲಗಳೆದಿದ್ದು, ನಾವು ಶಾಂತಿಯುತವಾಗಿ ಆಶ್ರಯವನ್ನು ಬಯಸುತ್ತಿದ್ದೇವೆ, ಯಾವುದೇ ವ್ಯಕ್ತಿ ಉಗ್ರಕೃತ್ಯಗಳಲ್ಲಿ ತೊಡಗಿದ್ದರೆ ಕೇಂದ್ರ ಸರ್ಕಾರ ನೆಲದ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ. 
SCROLL FOR NEXT