ದೇಶ

ಬಿಬೇಕ್ ಡೆಬ್ರಾಯ್ ಪ್ರಧಾನಮಂತ್ರಿ ಸಚಿವಾಲಯದ ಆರ್ಥಿಕ ಸಲಹಾ ಸಮಿತಿ ಮುಖ್ಯಸ್ಥ

Vishwanath S
ನವದೆಹಲಿ: ನೀತಿ ಆಯೋಗದ ಸದಸ್ಯ ಬಿಬೇಕ್ ಡೆಬ್ರಾಯ್ ಅವರನ್ನು ಪ್ರಧಾನಮಂತ್ರಿ ಸಚಿವಾಲಯದ ಆರ್ಥಿಕ ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಯ್ಕೆ ಮಾಡಿದ್ದಾರೆ. 
ಆರ್ಥಿಕ ಸಲಹಾ ಸಮಿತಿಯು ಐವರು ಸದಸ್ಯರನ್ನು ಒಳಗೊಂಡಿದ್ದು ಸುರ್ಜಿತ್ ಬಲ್ಲಾ, ರತೀನ್ ರಾಯ್ ಮತ್ತು ಆಶೀಮಾ ಗೋಯಲ್ ಹಾಗೂ ನೀತಿ ಆಯೋಗದ ಪ್ರಧಾನ ಸಲಹೆಗಾರ ರತನ್ ವಾಟಲ್ ಅವರು ಪಾರ್ಟ್ ಟೈಂ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. 
ಪ್ರಧಾನಿ ಅವರಿಂದ ಉಲ್ಲೇಖಿಸಲ್ಪಟ್ಟಿರುವ ಯಾವುದೇ ಆರ್ಥಿಕ ಸಂಬಂಧಿತ ಸಮಸ್ಯೆಯನ್ನು ಆರ್ಥಿಕ ಸಲಹಾ ಸಮಿತಿ(ಇಎಸಿ) ವಿಶ್ಲೇಷಿಸುತ್ತದೆ. ಜತೆಗೆ ಸ್ಥೂಲ ಆರ್ಥಿಕತೆಯ ಮಹತ್ವವನ್ನು ಈ ಸಮಿತಿಯು ವಿಶ್ಲೇಷಿಸುತ್ತದೆ.
SCROLL FOR NEXT