ಜಯಲಲಿತಾ 
ದೇಶ

ಜಯಾ ಹೆಬ್ಬೆಟ್ಟು ಗುರುತು ವಿವಾದ: ಚು.ಆಯೋಗದ ಹಿರಿಯ ಅಧಿಕಾರಿಗೆ ಹೈಕೋರ್ಟ್ ಸಮನ್ಸ್

ಚುನಾವಣೆ ದಾಖಲೆಗಳಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಹೆಬ್ಬೆಟ್ಟು ಗುರುತಿಗೆ ಸಂಬಂಧಿಸಿದಂತೆ ಮದ್ರಾಸ್..

ಚೆನ್ನೈ: ಚುನಾವಣೆ ದಾಖಲೆಗಳಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಹೆಬ್ಬೆಟ್ಟು ಗುರುತಿಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಬುಧವಾರ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗೆ ಸಮನ್ಸ್ ಜಾರಿ ಮಾಡಿದೆ.
ಜಯಾ ಹೆಬ್ಬೆಟ್ಟು ಗುರುತು ವಿವಾದಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 6ರಂದು ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ಚುನಾವಣಾ ಆಯೋಗದ ಪ್ರಧಾನ ಕಾರ್ಯದರ್ಶಿಗೆ ಮದ್ರಾಸ್ ಹೈಕೋರ್ಟ್ ಇಂದು ಸಮನ್ಸ್ ನೀಡಿದೆ.
ಕಳೆದ ವರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಅವರ ಬಲಗೈ ಊದಿಕೊಂಡಿದ್ದರಿಂದ ಸಹಿ ಮಾಡಲು ಸಾಧ್ಯವಾಗದ ಕಾರಣ ಐಎಡಿಎಂಕೆ ಅಭ್ಯರ್ಥಿಗಳ ‘ಬಿ’ ಫಾರಂ ಮೇಲೆಎಡಗೈ ಹೆಬ್ಬೆಟ್ಟಿನ ಗುರುತು ಹಾಕಿದ್ದರು. ಇದನ್ನು ಚುನಾವಣಾ ಆಯೋಗ ಮಾನ್ಯ ಮಾಡಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಡಿಎಂಕೆ ಅಭ್ಯರ್ಥಿ ಪಿ ಶರವಣನ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಶರವಣನ್ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಜನಪ್ರತಿನಿಧಿ ಕಾಯ್ದೆ ಮತ್ತು ಚುನಾವಣಾ ನೀತಿ ಸಂಹಿತೆಯಲ್ಲಿ ಅನಾರೋಗ್ಯ ಪೀಡಿತ ವ್ಯಕ್ತಿಯ ಹೆಬ್ಬೆಟ್ಟು ಗುರುತಿಗೆ ಅವಕಾಶವಿದೆಯೇ ಎಂಬುದರ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್‌

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ