ವಿಶ್ವಾಸ್ ಗುಪ್ತಾ 
ದೇಶ

ಡೇರಾ ಗೂಂಡಾಗಳು ಬೆದರಿಕೆ ಹಾಕುತ್ತಿದ್ದಾರೆ: ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ

ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಂ ಸಿಂಗ್ ರಹಸ್ಯಗಳನ್ನು ಬಯಲು ಮಾಡುತ್ತಿರುವುದಕ್ಕೆ ಡೇರಾ ಗೂಂಡಾಗಳು ನನಗೆ ಬೆದರಿಕೆ ಹಾಕುತ್ತಿದ್ದಾರೆಂದು ಗುರ್ಮಿತ್ ದತ್ತುಪುತ್ರಿ ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ ಅವರು ಹೇಳಿಕೊಂಡಿದ್ದಾರೆ...

ಕರ್ನಾಲ್: ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಂ ಸಿಂಗ್ ರಹಸ್ಯಗಳನ್ನು ಬಯಲು ಮಾಡುತ್ತಿರುವುದಕ್ಕೆ ಡೇರಾ ಗೂಂಡಾಗಳು ನನಗೆ ಬೆದರಿಕೆ ಹಾಕುತ್ತಿದ್ದಾರೆಂದು ಗುರ್ಮಿತ್ ದತ್ತುಪುತ್ರಿ ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ ಅವರು ಹೇಳಿಕೊಂಡಿದ್ದಾರೆ. 
ಡೇರಾ ಗೂಂಡಾಗಳಿಂದ ತಮ್ಮ ಪ್ರಾಣಕ್ಕೆ ಬೆದರಿಕೆಯಿಂದೆ ಎಂದು ಹೇಳಿ ಇಂದು ಬೆಳಿಗ್ಗೆ ತಮ್ಮ ತಂದೆ ಮಹೇಂದರ್ ಗುಪ್ತಾ ಅವರೊದಿಗೆ ಕರ್ನಾಲ್ ನಲ್ಲಿರುವ ಪೊಲೀಸ್ ಠಾಣೆಗೆ ಭೇಟಿ ನೀಡಿರುವ ವಿಶ್ವಾಸ್ ಗುಪ್ತಾ ಅವರು ದೂರು ದಾಖಲಿಸಿದ್ದಾರೆ. 
1991ರಲ್ಲಿ ಹನಿಪ್ರೀತ್'ಳನ್ನು ವಿಶ್ವಾಸ್ ಗುಪ್ತಾ ಅವರು ವಿವಾಹವಾಗಿದ್ದರು. ಅತ್ಯಾಚಾರ ಪ್ರಕರಣ ಸಂಬಂಧ ದೋಷಿ ಎಂದು ಸಾಬೀತಾದ ಗುರ್ಮಿತ್ ಜೈಲು ಪಾಲಾಗಿದ್ದ. ಇದಾದ ಬಳಿಕ ಬಾಬಾ ಕುರಿತಂತೆ ಸಾಕಷ್ಟು ರಹಸ್ಯಗಳು ಬಹಿರಂಗವಾಗಲು ಆರಂಭಿಸಿದ್ದವು. 
ಗುರ್ಮಿತ್ ಜೈಲು ಪಾಲಾದ ಬಳಿಕ ಹೇಳಿಕೆ ನೀಡಿದ್ದ ವಿಶ್ವಾಸ್ ಗುಪ್ತಾ ಅವರು ದತ್ತು ಪುತ್ರಿ ಎಂದು ಹೇಳುಕೊಳ್ಳುತ್ತಿದ್ದ ಗುರ್ಮಿತ್ ಹನಿಪ್ರೀತ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಹೇಳಿದ್ದರು. 
ಇದೀಗ ರಾಮ್ ರಹೀಮ್ ಕುರಿತ ರಹಸ್ಯಗಳನ್ನು ಬಹಿರಂಗಪಡಿಸುತ್ತಿರುವುದಕ್ಕೆ ಗುರ್ಮಿತ್ ಬೆಂಬಲಿಗರು ನನಗೆ ಬೆದರಿಕೆ ಹಾಕುತ್ತಿದ್ದಾರೆಂದು ದೂರು ದಾಖಲಿಸಿದ್ದಾರೆ. 
ಇದಲ್ಲದೆ, ಗುರ್ಮಿತ್ ವಿರುದ್ಧ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಕೆಲ ಮಾಧ್ಯಮಗಳಿಗೂ ಡೇರಾ ಬೆಂಬಲಿಗರು ಬೆದರಿಕೆ ಪತ್ರಗಳನ್ನು ರವಾನಿಸಿದ್ದಾರೆಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel