ಸಾಂದರ್ಭಿಕ ಚಿತ್ರ 
ದೇಶ

ಕೊಲೆ ಪ್ರಕರಣದಲ್ಲಿ ಸಿಲುಕಿದ್ದ ವಿದ್ಯಾರ್ಥಿಯ ರಕ್ಷಿಸಿದ ಗೂಗಲ್!

ಕೊಲೆ ಪ್ರಕರಣದಲ್ಲಿ ಸಿಲುಕಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಬೇಕಿದ್ದ ಓರ್ವ ವಿದ್ಯಾರ್ಥಿಯನ್ನು ಖ್ಯಾತ ಸರ್ಚ್ ಎಂಜಿನ್ ಗೂಗಲ್ ರಕ್ಷಿಸಿರುವ ಅಪರೂಪದ ಪ್ರಕರಣ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರ: ಕೊಲೆ ಪ್ರಕರಣದಲ್ಲಿ ಸಿಲುಕಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಬೇಕಿದ್ದ ಓರ್ವ ವಿದ್ಯಾರ್ಥಿಯನ್ನು ಖ್ಯಾತ ಸರ್ಚ್ ಎಂಜಿನ್ ಗೂಗಲ್ ರಕ್ಷಿಸಿರುವ ಅಪರೂಪದ ಪ್ರಕರಣ ಕಾನ್ಪುರದಲ್ಲಿ ನಡೆದಿದೆ.

ಮಿತಿ ಮೀರಿದ ತಂತ್ರಜ್ಞಾನ ಬಳಕೆ ಎಷ್ಟು ಅಪಾಯಕಾರಿಯೊ, ಅಷ್ಟೇ ಉಪಯೋಗಕಾರಿಯೂ ಹೌದು ಎನ್ನುವುದಕ್ಕೆ ಮತ್ತೊಂದು ಪ್ರಕರಣ ಸಾಕ್ಷಿಯಾಗಿದ್ದು, ಕೊಲೆ ಪ್ರಕರಣದಲ್ಲಿ ಸಿಲುಕಿ ಶಿಕ್ಷೆಗೆ ಗುರಿಯಾಗಬೇಕಿದ್ದ ಓರ್ವ  ವಿದ್ಯಾರ್ಥಿಯನ್ನು ಗೂಗಲ್ ಸರ್ಜ್ ಎಂಜಿನ್ ರಕ್ಷಿಸಿದೆ.

ಈ ಹಿಂದೆ ಕಾನ್ಪುರದಲ್ಲಿ ನಡೆದಿದ್ದ 11 ವರ್ಷದ ಬಾಲಕ ರೆಹಾನ್ ನ ಹತ್ಯೆ ಸಂಬಂಧ ಕಾಲೇಜು ವಿದ್ಯಾರ್ಥಿ ಜೈ ಪ್ರತಾಪ್ ಸಿಂಗ್ ಅಲಿಯಾಸ್ ಮೋಹಿತ್  ನನ್ನು ಬಂಧಿಸಲಾಗಿತ್ತು. ಮೋಹಿತ್ ಭಾರತೀಯ ವಾಯುಸೇನೆಯ  ಅಧಿಕಾರಿಯೊಬ್ಬರ ಮಗನಾಗಿದ್ದು, ಇದೀ ಕಾರಣಕ್ಕೆ ಈ ಪ್ರಕರಣ ಕಾನ್ಪುರದಲ್ಲಿ ಹೆಚ್ಚು ಸುದ್ದಿಗೆ ಗ್ರಾಸವಾಗಿತ್ತು. ಅಗಸ್ಟ್ 20, 2016 ರಂದು ಕಾಣೆಯಾಗಿದ್ದ ಬಾಲಕ ರೆಹಾನ್ ಶವವಾಗಿ ಪತ್ತೆಯಾಗಿದ್ದ.

ಈ ಸಂಬಂದ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಮೋಹಿತ್ ಪರ ವಕೀಲರು ಆತ ಕೊಲೆ ಮಾಡಿಲ್ಲ ಎಂದು ವಾದಿಸಿದ್ದರು. ಅಲ್ಲದೆ ಪೊಲೀಸರ ತನಿಖಾ ಕ್ರಮ ಅನುಮಾನಾಸ್ಪದವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಇದಕ್ಕೆ  ಇಂಬು ನೀಡುವಂತೆ ವಿಚಾರಣೆ ವೇಳೆ ಮೋಹಿತ್ ಕೂಡ ರೆಹಾನ್ ಕೊಲೆಯಾದ ಸಂದರ್ಭದಲ್ಲಿ ನಾನು ಆ ಸ್ಥಳದಲ್ಲಿರಲಿಲ್ಲ. ನಾನು ಅನಿಮೇಷನ್ ತರಬೇತಿ ಪಡೆಯುತ್ತಿದ್ದು, ನನ್ನ ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿದ್ದೆ ಎಂದು  ಹೇಳಿದ್ದರು. ಮೋಹಿತ್ ವಾದ ಆಲಿಸಿದ ನ್ಯಾಯಾಧೀಶರು ಮೋಹಿತ್ ಹೇಳಿಕೆ ಸಂಬಂಧ ಗೂಗಲ್ ಇಂಡಿಯಾದಿಂದ ವರದಿ ಕೇಳಿದ್ದರು.

ನ್ಯಾಯಾಲಯದ ಸೂಚನೆ ಮೇರೆಗೆ ಮೋಹಿತ್ ಐಪಿ ವಿಳಾಸದ ಮೂಲಕ ಆತನ ಕಂಪ್ಯೂಟರಿನ ಕಾರ್ಯಚಟುವಟಿಕೆಗಳ ಕುರಿತು ಗೂಗಲ್ ನ್ಯಾಯಾಲಯಕ್ಕೆ ವರದಿ ನೀಡಿದ್ದು, ವರದಿಯಲ್ಲಿ ಬಾಲಕ ರೆಹಾನ್ ಕೊಲೆಯಾದ  ಸಂದರ್ಭದಲ್ಲಿ ಮೋಹಿತ್ ಕಂಪ್ಯೂಟರಿನ ಐಪಿ ಅಡ್ರೆಸ್ ಚಾಲ್ತಿಯಲ್ಲಿತ್ತು ಎಂದು ವರದಿ ನೀಡಿತ್ತು. ಗೂಗಲ್ ನೀಡಿದ ವರದಿಗೂ ಹಾಗೂ ಆರೋಪಿ ಮೋಹಿತ್ ಹೇಳಿಕೆಗೂ ತಾಳೆಯಾದ ಕಾರಣ ನ್ಯಾಯಾಲಯ ಕೊಲೆ ಪ್ರಕರಣದಲ್ಲಿ  ಮೋಹಿತ್ ನ ಕೈವಾಡವಿಲ್ಲ ಎಂದು ತೀರ್ಪು ನೀಡಿ ಅತನನ್ನು ವಜಾಗೊಳಿಸಿದೆ.

ಈ ಸಂಬಂಧ ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ರಜತ್ ಸಿಂಗ್ ಜೈನ್ ಅವರು, ಮೋಹಿತ್ ನನ್ನು ಖುಲಾಸೆಗೊಳಿಸಿದ್ದಲ್ಲದೇ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರ ವಿರುದ್ಧ ಗರಂ ಆಗಿದ್ದಾರೆ.  ಆಲ್ಲದೆ ಈ ಪ್ರಕರಣದಲ್ಲಿ ಪೊಲೀಸರ ಪಾತ್ರ ಅನುಮಾನಾಸ್ಪದವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ ನ್ಯಾಯಾಧೀಶರು, ತನಿಖಾಧಿಕಾರಿ ಹರಿ ಶಂಕರ್ ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ  ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT