ಜೆಟ್ ಏರ್ ವೇಸ್ ನಿಂದ 75 ಬಿ737 ವಿಮಾನ ಖರೀದಿಗೆ ಬೋಯಿಂಗ್ ನೊಂದಿಗೆ ಒಪ್ಪಂದ
B-737 ಆವೃತ್ತಿಯ ಹೊಸ 75 ವಿಮಾನಗಳನ್ನು ಖರೀದಿಸಲು ಜೆಟ್ ಏರ್ವೇಸ್ ಬೋಯಿಂಗ್ ವಿಮಾನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಜೆಟ್ ಏರ್ವೇಸ್ ತಿಳಿಸಿದೆ.
ನವದೆಹಲಿ: B-737 ಆವೃತ್ತಿಯ ಹೊಸ 75 ವಿಮಾನಗಳನ್ನು ಖರೀದಿಸಲು ಜೆಟ್ ಏರ್ವೇಸ್ ಬೋಯಿಂಗ್ ವಿಮಾನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಜೆಟ್ ಏರ್ವೇಸ್ ತಿಳಿಸಿದೆ.
ಜೆಟ್ ಏರ್ವೇಸ್ ಬಳಿ ಈಗಾಗಲೇ ಬೋಯಿಂಗ್ 777-300ಇಆರ್ ಎಸ್, ಏರ್ ಬಸ್ A330-200/300, ನೆಕ್ಸ್ಟ್ ಜನರೇಷನ್ ಬೋಯಿಂಗ್ 737 ಹಾಗೂ ಎಟಿಆರ್ 72-500/600 ಸೇರಿದಂತೆ 119 ವಿಮಾನಗಳಿವೆ, ಇತ್ತೀಚಿನ ಮಾಹಿತಿಯ ಪ್ರಕಾರ ಜೆಟ್ ಏರ್ವೇಸ್ ವಿಮಾನ ಸಂಸ್ಥೆ ಬೋಯಿಂಗ್ 737 ಮ್ಯಾಕ್ಸ್ ಏರ್ ಕ್ರಾಫ್ಟ್ ನ 75 ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದು ಜುಲೈ-ಆಗಸ್ಟ್ ವೇಳೆಗೆ ಹೊಸ ವಿಮಾನಗಳು ಲಭ್ಯವಾಗಲಿವೆ ಎಂದು ಸಂಸ್ಥೆ ತಿಳಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.