ತಿರುವನಂತಪುರ; ಮಹಿಳೆಯರು ಜೀನ್ಸ್ ಹಾಕುತ್ತಿರುವುದರಿಂದ ಮಕ್ಕಳು ನಪುಂಸಕರಾಗಿ ಹಾಗೂ ಆಟಿಸಂ ಕಾಯಿಲೆಯಿಂದ ಜನಿಸುತ್ತಿದ್ದಾರೆಂದು ಕೇರಳ ಶಿಕ್ಷಕರೊಬ್ಬರು ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾಗತೊಡಗಿದೆ.
ಕಾಲಡಿಯ ಸರ್ಕಾರಿ ಕಾಲೇಜ್ ವೊಂದರಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ರಜಿತ್ ಕುಮಾರ್ ಎಂಬುವವರು ಈ ರೀತಿಯ ಹೇಳಿಕೆ ನೀಡಿದ್ದು, ಶಿಕ್ಷಕನ ಈ ಹುಸಿ ವೈಜ್ಞಾನಿಕ ಮತ್ತು ಕಾಮಪ್ರಚೋದಕ ಹೇಳಿಕೆ ಸಂಬಂಧ ಇದೀಗ ಕೇರಳ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.
ಸಭೆಯೊಂದರಲ್ಲಿ ಮಕ್ಕಳು ನಪುಂಸಕರಾಗಿ ಹಾಗೂ ಆಟಿಸಂ ಕಾಯಿಲೆಯಿಂದ ಏಕೆ ಜನಿಸುತ್ತಾರೆಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಪೋಷಕರು ವಿರುದ್ಧ ವರ್ತನೆಯಿಂದಾಗಿ ಮಕ್ಕಳು ಸ್ವಲೀನತೆಗೆ ಗುರಿಯಾಗುತ್ತಿದ್ದಾರೆ. ಮಹಿಳೆಯ ತನ್ನ ಹೆಣ್ತನವನ್ನು ಮರೆತರೆ ಅಥವಾ ಕಡೆಗಣಿಸಿದರೆ, ಪುರುಷ ಪುರುಷತ್ವವನ್ನು ಮರೆತರೆ ಅವರಿಗೆ ಹುಟ್ಟುವ ಹೆಣ್ಣು ಮಗು ಗಂಡಿನ ಗುಣಲಕ್ಷಣ ಹೊಂದಿರುತ್ತದೆ, ಇಲ್ಲದೆ ಹೋದರೆ ನಪುಂಸಕನಾಗುತ್ತದೆ ಎಂದು ತಿಳಿಸಿದ್ದಾರೆ.
ರಜಿತ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೇರಳ ರಾಜ್ಯ ಶಿಕ್ಷಣ ಸಚಿವೆ ಕೆ.ಕೆ. ಶೈಲಜಾ ಅವರು, ಎಲ್ಲಾ ಸರ್ಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳು ತಮ್ಮ ಕಾರ್ಯಕ್ರಮಕ್ಕೆ ರಜಿತ್ ಅವರನ್ನು ಆಹ್ವಾನಿಸಿದ್ದರೆ, ಅದನ್ನು ತಡೆಹಿಡಿಯಬೇಕು ಎಂದು ಸೂಚಿಸಿದ್ದಾರೆ.
ರಜಿತ್ ಅವರು ಇದೇ ರೀತಿಯ ಹಲವು ವೇದಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದು, ಈ ಕುರಿತ ಕೆಲ ವಿಡಿಯೋಗಳು ಯೂಟ್ಯೂಬ್ ನಲ್ಲಿ ಹರಿದಾಡುತ್ತಿವೆ. ರಜಿತ್ ಅವರು ಯೂಟ್ಯೂಬ್ ನಲ್ಲಿ 2,500 ಮಂದಿ ಹಿಂಬಾಲಕರನ್ನೂ ಹೊಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos