ಜನತಾ ದರ್ಬಾರ್; ದೂರು ನೀಡಲು ಹೋದಾಗ ಸಿಎಂ ಯೋಗಿ ನನ್ನನ್ನು ದೂರ ತಳ್ಳಿದರು- ಉತ್ತರಪ್ರದೇಶ ವ್ಯಕ್ತಿ ಆರೋಪ
ಗೋರಖ್ಪುರ: ಉತ್ತರ ಪ್ರದೇಶ ಗೋರಖ್ಪುರದಲ್ಲಿ ನಡೆದ ಜನತಾ ದರ್ಬಾರ್ ವೇಳೆ ಶಾಸಕನ ವಿರುದ್ಧ ದೂರು ನೀಡಲು ಹೋದಾಗ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನನ್ನನ್ನು ದೂರ ತಳ್ಳಿದರು ಎಂದು ವ್ಯಕ್ತಿಯೊಬ್ಬರು ಆರೋಪ ಮಾಡಿದ್ದಾರೆ.
ಆಯುಷ್ ಸಿಂಘಾಲ್ ಯೋಗಿ ಆದಿತ್ಯಾನಾಥ್ ವಿರುದ್ಧ ಆರೋಪ ಮಾಡುತ್ತಿರುವ ವ್ಯಕ್ತಿಯಾಗಿದ್ದಾರೆ.
ಶಾಸಕ ಅಮನ್ಮಣಿ ತ್ರಿಪಾಠಿಯವರು ನನ್ನ ಭೂಮಿಯನ್ನು ಕಬಳಿಸಿದ್ದರು. ಹೀಗಾಗಿ ಸಾಕ್ಷ್ಯಾಧಾರ ಹಾಗೂ ದಾಖಲೆಗಳನ್ನು ತೆಗೆದುಕೊಂಡು ಜನತಾ ದರ್ಬಾರ್ ವೇಳೆ ಯೋಗಿ ಆದಿತ್ಯನಾಥ್ ಅವರಿಗೆ ದೂರು ನೀಡಲು ಹೋಗಿದ್ದೆ. ದೂರು ಪತ್ರ ನೀಡುತ್ತಿದ್ದಂತೆಯೇ ಯೋಗಿ ಆದಿತ್ಯನಾಥಅ ಅವರು ಪತ್ರಗಳನ್ನು ಎಸೆದು, ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಹೇಳಿ ನನ್ನನ್ನು ತಳ್ಳಿದರು ಎಂದು ಹೇಳಿದ್ದಾರೆ.
ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಗೋರಖ್ಪುರ ಜಿಲ್ಲಾಧಿಕಾರಿ ಕೆ.ವಿಜಯೇಂದ್ರ ಪಾಂಡಿಯಾನ್ ಅವರು, ಯಾವುದೇ ದಾಖಲೆಗಳಿಲ್ಲದೆ ಸಿಂಗಾಲ್ ಅವರು ಬಂದಿದ್ದರು. ಹೀಗಾಗಿ ಅರ್ಜಿ ತೆಗೆದುಕೊಂಡು ಅರ್ಜಿಯಲ್ಲಿರುವ ಮಾಹಿತಿಗಳನ್ನು ಬರೆದುಕೊಂಡು ಬರುವಂತೆ ತಿಳಿಸಿದ್ದರು ಎಂದು ಹೇಳಿದ್ದಾರೆ.
ಕೆಲ ದೂರುದಾರರು ಯಾವುದೇ ದಾಖಲೆಗಳು ಹಾಗೂ ಪತ್ರಗಳಿಲ್ಲದೆಯೇ ಬರುತ್ತಾರೆ. ಹೀಗಾಗಿ ಮುಖ್ಯಮಂತ್ರಿಗಳು ಪತ್ರವನ್ನು ತೆಗೆದುಕೊಂಡು ಬರುವಂತೆ ತಿಳಿಸಿದ್ದರು. ಆಯುಷ್ ಅವರೂ ಕೂಡ ಬರಿಗೈಯಲ್ಲಿ ಬಂದಿದ್ದರು. ಹೀಗಾಗಿ ಪತ್ರಗಳನ್ನು ತರುವಂತೆ ತಿಳಿಸಿದ್ದರು. ಆಯುಷ್ ಅವರನ್ನು ಜಂಟಿ ಭೂಮಿ ವಿಭಜನೆಯ ವಿಷಯವಾಗಿತ್ತು ಎಂದು ತಿಳಿಸಿದ್ದಾರೆ.